
ರಗ್ಬಿ ಟೂರ್ನಮೆಂಟ್ ಸಲುವಾಗಿ 14ವರ್ಷದ ಜೋರ್ಡನ್ ಫ್ರಾನ್ಸ್ ಗೆ ಹೋಗಿದ್ದಾಗ, ಅಲ್ಲಿ ಆತನಿಗೆ ಕೇಟಿ ಎನ್ನುವ ಹದಿಮೂರು ವರ್ಷದ ಹುಡುಗಿ ಪರಿಚಯವಾಗಿದ್ದಾಳೆ. ಆಕೆ ನನ್ನ ನಗು ಮತ್ತು ಸಂತೋಷಕ್ಕೆ ಕಾರಣಳಾಗಿದ್ದಳು ಎಂದು ಜೋರ್ಡನ್ ಹೇಳಿಕೊಂಡಿದ್ದಾನೆ. ಆದರೆ ಟ್ರಿಪ್ ಮುಗಿದ ಮೇಲೆ ಇಬ್ಬರು ತಮ್ಮ ತಮ್ಮ ಮನೆಗೆ ವಾಪಸ್ಸಾಗಿದ್ದಾರೆ. ಆದರು ಪತ್ರಗಳ ಮೂಲಕ ಇಬ್ಬರು ಮಾತನಾಡುತ್ತಿದ್ದರು. ಆದರೆ ಈ ಮಾತುಕತೆ ಕೆಲದಿನಗಳಲ್ಲಿ ಮುಗಿದು ಹೋಯಿತು.
ಆದರೆ ಜೋರ್ಡನ್ ಗೆ ಇತ್ತೀಚಿಗೆ ತನ್ನ ರೂಂನಲ್ಲಿ ಕೇಟಿ ಬರೆದ ಪ್ರೇಮ ಪತ್ರಗಳು ದೊರಕಿವೆ. ಪತ್ರಗಳನ್ನ ನೋಡಿದ್ಮೇಲೆ ಬಾಲ್ಯದ ಪ್ರೀತಿ ನೆನಪಾಗಿದ್ದು, ಕೇಟಿಯನ್ನ ಮತ್ತೆ ಸಂಪರ್ಕಿಸಲು ಜೋರ್ಡನ್ ಎಲ್ಲಾ ಪ್ರೇಮ ಪತ್ರಗಳ ಫೋಟೊ ಕ್ಲಿಕ್ಕಿಸಿ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾನೆ. ಸೋಷಿಯಲ್ ಮೀಡಿಯಾದ ಮೂಲಕ ಕಳೆದು ಹೋದ ಪ್ರೀತಿಯನ್ನು ಹುಡುಕಲು ಜೋರ್ಡನ್ ಮುಂದಾಗಿದ್ದಾನೆ. ಪೋಸ್ಟ್ ನೋಡಿದ ಹಲವರು ಜೋರ್ಡನ್ ಗೆ ಪ್ರೋತ್ಸಾಹ ತುಂಬಿದ್ದಾರೆ.