ಕೆಲಸ ಹುಡುಕುವುದು ಕೆಲವು ಬಾರಿ ಬಹಳ ಕಷ್ಟವೆನಿಸುತ್ತದೆ. ಉದ್ಯೋಗವನ್ನು ಹುಡುಕುತ್ತಿರುವವರು ನೇಮಕಾತಿ ವೆಬ್‌ಸೈಟ್‌ಗಳ ಸಹಾಯವನ್ನು ಪಡೆಯುವ ಯುಗದಲ್ಲಿ, ಲಂಡನ್‌ನ ವ್ಯಕ್ತಿಯೊಬ್ಬರು ತನಗಾಗಿ ಉದ್ಯೋಗವನ್ನು ಭದ್ರಪಡಿಸಿಕೊಳ್ಳುವ ವಿಶಿಷ್ಟ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಹೌದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವಿಸುತ್ತಿರುವ 21 ವರ್ಷದ ಜಾರ್ಜ್ ಕೊರ್ನಿಯುಕ್ ಅವರು ಕ್ಯೂಆರ್ ಕೋಡ್ ಹೊಂದಿರುವ ಚಿಹ್ನೆಯನ್ನು ಅಂಟಿಸುವ ಮೂಲಕ ಉದ್ಯೋಗದಾತರನ್ನು ಆಕರ್ಷಿಸಲು ಪ್ರಯತ್ನಿಸಿದ್ದಾರೆ. ಇದು ಉದ್ಯೋಗದಾತರನ್ನು ತನ್ನ ಲಿಂಕ್ಡ್ಇನ್ ಪ್ರೊಫೈಲ್ ಮತ್ತು ಸಿವಿ ವೀಕ್ಷಿಸಲು ನಿರ್ದೇಶಿಸುತ್ತದೆ. ಅಷ್ಟಕ್ಕೂ ಈತ ಕೆಲಸ ಹುಡುಕಲು ಅಸಾಮಾನ್ಯ ಮಾರ್ಗವನ್ನು ಏಕೆ ಆರಿಸಿಕೊಂಡರು ಎಂದು ಆಶ್ಚರ್ಯಪಡುತ್ತೀರಾ ? ಯಾಕೆಂದರೆ, ಜಾರ್ಜ್ ಉದ್ಯೋಗವನ್ನು ಹುಡುಕುವ ಸಾಂಪ್ರದಾಯಿಕ ವಿಧಾನಗಳಿಂದ ನಿರಾಶೆಗೊಂಡಿದ್ದಾನಂತೆ. ಹೀಗಾಗಿ ಈ ವಿಶಿಷ್ಟ ವಿಧಾನದ ಮೂಲಕ ಕೆಲಸ ಹುಡುಕಲು ಪ್ರಯತ್ನ ನಡೆಸಿದ್ದಾರೆ.
ಕಾರ್ನಿಯುಕ್ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸೇಂಟ್ ಎಡ್ಮಂಡ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಬ್ಯಾಂಕಿಂಗ್ ಅಥವಾ ವಿಮಾ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಬಯಸುತ್ತಾನೆ. ಆದರೆ, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಸಾಮಾನ್ಯ ವಿಧಾನಗಳಿಂದ ಬೇಸರಗೊಂಡಿದ್ದಾರೆ. ಅನೇಕ ನಿರಾಕರಣೆ ಪತ್ರಗಳನ್ನು ಪಡೆದ ನಂತರ ಹತಾಶೆಗೊಂಡ ಜಾರ್ಜ್, ಕಚೇರಿ ಕಟ್ಟಡದ ಹೊರಗೆ ಫಲಕವನ್ನು ಅಂಟಿಸುವ ಮೂಲಕ ಉದ್ಯೋಗದಾತರನ್ನು ಆಕರ್ಷಿಸುವ ಈ ಹೊಸ ಕಲ್ಪನೆಯನ್ನು ರೂಪಿಸಿದರು. ಚಿಹ್ನೆಯು ಕ್ಯೂಆರ್ ಕೋಡ್ ಹೊಂದಿರುವ ಬೋರ್ಡ್ ಆಗಿದ್ದು, ಜನರನ್ನು ಅವರ ಸಿವಿ ಮತ್ತು ಲಿಂಕ್ಡ್ಇನ್ ಪ್ರೊಫೈಲ್‌ಗೆ ಮರುನಿರ್ದೇಶಿಸುತ್ತದೆ.