ಗಿನ್ನಿಸ್ ದಾಖಲೆ ಮಾಡಲು ಇಂಥಹದ್ದೇ ವಿಚಾರ ಬೇಕೆಂದಿಲ್ಲ ಎಂಬುದಕ್ಕೆ ಇಲ್ಲೊಬ್ಬ ಮಹಾನ್ ಸಾಧನೆ ಮಾಡಿದ್ದಾನೆ. ಸುಮಾರು 17 ಗಂಟೆಗಳಲ್ಲಿ 67 ವಿವಿಧ ಪಬ್ಗಳಲ್ಲಿ ಡ್ರಿಂಕ್ಸ್ ಮಾಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಬ್ರಿಟಿಶ್ ವ್ಯಕ್ತಿ ಇತಿಹಾಸ ನಿರ್ಮಿಸಿದ್ದಾರೆ.
ಲಿವರ್ಪೂಲ್ ಎಕೋ ಪ್ರಕಾರ, ಬ್ರಿಟಿಷ್ ವ್ಯಕ್ತಿಯನ್ನು ನಾಥನ್ ಕ್ರಿಂಪ್ ಎಂದು ಗುರುತಿಸಲಾಗಿದೆ. 22 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು 24 ಗಂಟೆಗಳಲ್ಲಿ ಹೆಚ್ಚು ಭೇಟಿ ನೀಡುವ ಪಬ್ಗಳ ಸವಾಲನ್ನು ಸ್ವೀಕರಿಸಿದ್ದರು. ಕ್ರಿಂಪ್ ಇಂಗ್ಲೆಂಡ್ನ ಬ್ರೈಟನ್ ಪ್ರದೇಶದಲ್ಲಿ 67 ಪಬ್ಗಳಲ್ಲಿ 17 ಗಂಟೆಗಳ ಸಮಯದ ಚೌಕಟ್ಟಿನೊಳಗೆ ಕುಡಿದು ಮುಗಿಸಿದರು. ಸವಾಲಿನ ಸಮಯದಲ್ಲಿ ಆತ ಒಬ್ಬಂಟಿಯಾಗಿರಲಿಲ್ಲ, ಅವನ ಜೊತೆಯಲ್ಲಿ ಸ್ನೇಹಿತರ ಜೊತೆಗಿದ್ದರು.
ಆ ಯುವಕನ ಪ್ರಕಾರ, ಸವಾಲು ಅವನಿಗೆ ಕಠಿಣವಾಗಿ ತೋರಿತು. ಇದು ನಾನು ಮಾಡಿದ ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ಆರಂಭದಲ್ಲಿ ಕಡಿಮೆ ಅಂದಾಜು ಮಾಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
ವರದಿಯ ಪ್ರಕಾರ, 17 ಗಂಟೆಗಳಲ್ಲಿ ಸುಮಾರು 20- 30 ಲೀಟರ್ ಪಾನೀಯಗಳನ್ನು ಕುಡಿದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಿರಂತರವಾಗಿ ಶೌಚಾಲಯಕ್ಕೆ ಹೋಗಬೇಕಾಗಿತ್ತು, ಇದು ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಹಾಗೆಯೇ, ಕ್ರಿಂಪ್ ತನ್ನನ್ನು ಬೆಂಬಲಿಸಲು ಬಂದ ತನ್ನ ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾನೆ.