ವೇಲ್ಸ್: ಇಲ್ಲಿಯ ಫೋರ್ಟೆ ಕುಟುಂಬವು ಅತಿ ಭಾರವಾದ ಸೂರ್ಯಕಾಂತಿ ಗಡ್ಡೆಯನ್ನು ಬೆಳೆದು ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. 6.44 ಕೆಜಿ ತೂಗುವ ದೈತ್ಯ ಸೂರ್ಯಕಾಂತಿ ಗಡ್ಡೆಯು 44 ವರ್ಷದ ಕೆವಿನ್ ಫೋರ್ಟೆಗೆ ಭಾರಿ ಆಶ್ಚರ್ಯವನ್ನುಂಟು ಮಾಡಿದೆ. ಇದನ್ನು ಈತ ಮಗ ಜೇಮಿ, ತಾಯಿ ಮಾರ್ಜೋರಿ ಮತ್ತು ಸಹೋದರ ಗರೆಥ್ ಸಹಾಯದಿಂದ ನೆಟ್ಟಿದ್ದನು. ಆದರೆ ಇಷ್ಟು ದೈತ್ಯಾಕಾರವಾಗಿ ಬೆಳೆದದ್ದು ನೋಡಿ ಕುಟುಂಬಸ್ಥರಿಗೆ ಅಚ್ಚರಿಯಾಗಿದೆ.
ದೈತ್ಯಾಕಾರದ ಹೂವು ಬೆಳೆಯಲು ಸುಮಾರು 20 ವಾರಗಳನ್ನು ತೆಗೆದುಕೊಂಡಿದೆ. ಕಳೆದ ಮೇ ಕೊನೆಯಲ್ಲಿ ಇದನ್ನು ನೆಡಲಾಗಿತ್ತು. ಅಕ್ಟೋಬರ್‌ನಲ್ಲಿ ಕೊಯ್ಲು ಮಾಡಲಾಗಿದೆ. ತೂಕದ ಪ್ರಕ್ರಿಯೆಗಾಗಿ ತಮ್ಮ ಸ್ಥಳೀಯ ಅಂಚೆ ಕಚೇರಿಗೆ ತೆಗೆದುಕೊಂಡು ಹೋಗಲಾಯಿತು ಎಂದಿದ್ದಾರೆ.
ಇದು 3.35 ಮೀಟರ್ (ಅಂದಾಜು 11 ಅಡಿ) ಎತ್ತರವನ್ನು ತಲುಪಿದೆ. ಈ ದೈತ್ಯಾಕಾರದ ಹೂವಿನ ತೂಕದಿಂದ ನಾನು ಅಚ್ಚರಿಗೊಳಗಾಗಿದ್ದೇನೆ ಎಂದು ಕೆವಿನ್ ಹೇಳಿದ್ದಾರೆ. ಅತ್ಯಂತ ಭಾರವಾದ ಸೂರ್ಯಕಾಂತಿಯ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಬೆರಗುಗೊಳಿಸುತ್ತಿದೆ.
https://www.youtube.com/watch?v=aUyshoNEKUg&feature=youtu.be