ಉದ್ಯಮಿ ಬಿ.ಆರ್. ಶೆಟ್ಟಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡುವಂತೆ ಇಂಗ್ಲೆಂಡ್ ಕೋರ್ಟ್ ಆದೇಶಿಸಿದೆ. ಬಿ.ಆರ್. ಶೆಟ್ಟಿಯವರ ಎನ್ಎಂಸಿ ಹೆಲ್ತ್ ಕೇರ್ ಕಂಪನಿಗೆ ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ 7500 ಕೋಟಿ ರೂಪಾಯಿಗೂ ಹೆಚ್ಚು ಸಾಲ ನೀಡಿತ್ತು. ಈ ಸಾಲವನ್ನು ಬಿ.ಆರ್. ಶೆಟ್ಟಿ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ 2020 ರ ಏಪ್ರಿಲ್ 15 ರಂದು ಬಿ.ಆರ್. ಶೆಟ್ಟಿ ಸೇರಿದಂತೆ ಇತರರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗಿತ್ತು.
ಅಬುಧಾಬಿಯ ಕಮರ್ಷಿಯಲ್ ಬ್ಯಾಂಕ್ ಇಂಗ್ಲೆಂಡ್ ನ್ಯಾಯಾಲಯದ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ನಡೆಸಿದ ಇಂಗ್ಲೆಂಡ್ ಕೋರ್ಟ್ ಬಿ.ಆರ್. ಶೆಟ್ಟಿಗೆ ಸೇರಿದ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ.
ಉದ್ಯಮಿ ಬಿ.ಆರ್. ಶೆಟ್ಟಿ ಮತ್ತು ಕಂಪನಿಯ ಸಿಇಒ ಪ್ರಶಾಂತ್ ಹಾಗೂ ನಿರ್ದೇಶಕರ ಆಸ್ತಿ ಮಾಡುವಂತೆ ಆದೇಶ ನೀಡಲಾಗಿದೆ. ಇವರು ಯಾರು ತಮ್ಮ ಆಸ್ತಿ ಮಾರುವುದಕ್ಕೆ ಅವಕಾಶವಿಲ್ಲ. ವಿಶ್ವದ ಎಲ್ಲಾ ಕಡೆ ಇರುವ ಆಸ್ತಿಗಳಿಗೆ ಈ ನಿರ್ಬಂಧ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.