ನೀರಿನ ಎಮ್ಮೆಗಳು ಮನೆಯೊಂದರ ಈಜುಕೊಳದಲ್ಲಿ ಸ್ನಾನ ಮಾಡಿದ ಕಾರಣಕ್ಕೆ ಇದೀಗ ವಿಮಾ ಕಂಪೆನಿಯು ದಂಪತಿಗೆ ಪರಿಹಾರದ ಮೊತ್ತವನ್ನು ನೀಡಬೇಕಿರುವ ಘಟನೆ ನಡೆದಿದೆ.
ಈ ಘಟನೆ ನಡೆಸಿರುವುದು ಲಂಡನ್‌ನಲ್ಲಿ. ಐಷಾರಾಮಿ ಈಜುಕೊಳದಲ್ಲಿ 18 ಎಮ್ಮೆಗಳು ಬಂದು ಕೊಳಕು ಮಾಡಿದೆ ಎಂದು ದಂಪತಿ ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರು ವಿಮಾ ಕಂಪೆನಿಯಿಂದ £70,000 (ಸುಮಾರು 70 ಲಕ್ಷ ರೂಪಾಯಿ) ಪರಿಹಾರ ಕೋರಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ವಿಮಾ ಕಂಪೆನಿಯು ವಾದ-ಪ್ರತಿವಾದ ಬಳಿಕ $31,000 (ಸುಮಾರು 26 ಲಕ್ಷ ರೂಪಾಯಿ) ಪರಿಹಾರ ನೀಡಲು ಒಪ್ಪಿಗೆ ನೀಡಿದೆ.
ಘಟನೆ ನಡೆದು 10 ತಿಂಗಳಾದರೂ ತಮಗೆ ಪರಿಹಾರ ಸಿಗಲಿಲ್ಲ ಎಂದು ದಂಪತಿ ಪುನಃ ದೂರು ದಾಖಲಿಸಿದ್ದರು. ಇದಕ್ಕೆ ಕ್ಷಮೆ ಕೋರಿರುವ ವಿಮಾ ಕಂಪೆನಿ ಕೂಡಲೆ ಪರಿಹಾರದ ಮೊತ್ತವನ್ನು ನೀಡುವುದಾಗಿ ಹೇಳಿದೆ.