ಪ್ರಪಂಚದಾದ್ಯಂತದ ಜನರನ್ನು ಒಂದುಗೂಡಿಸುವ ಏಕೈಕ ಶಕ್ತಿ ಸಂಗೀತಕ್ಕಿದೆ. ಹಾಡು, ನೃತ್ಯವು ಭಾಷೆ, ಗಡಿಗಳನ್ನೂ ಮೀರಿ ಬೆಳೆಯುತ್ತದೆ. ಇದೀಗ ವಿನೋದ ಮತ್ತು ಉಲ್ಲಾಸದಿಂದ ತುಂಬಿದ ಕಾಲೇಜು ಸಾಂಸ್ಕೃತಿಕ ಉತ್ಸವದ ಈ ವಿಡಿಯೊ ವೈರಲ್ ಆಗಿದೆ. ಇದನ್ನು ನೋಡಿದ್ರೆ ಖಂಡಿತಾ ನಿಮ್ಮ ಮೊಗದಲ್ಲಿ ನಗುವರಳದೆ ಇರಲಾರದು.
ಸನ್ನಿ ಹುಂಡಾಲ್ ಎಂಬುವವರು ಈ ಉಲ್ಲಾಸದಾಯಕ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕಿರು ವಿಡಿಯೋವನ್ನು ಮೊದಲಿಗೆ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಯುಕೆಯ ಕಾಲೇಜೊಂದರಲ್ಲಿ ನಡೆದ ಸಾಂಸ್ಕೃತಿಕ ಸಮಾರಂಭದಲ್ಲಿ ವಿದ್ಯಾರ್ಥಿಯೊಬ್ಬ ನೃತ್ಯ ಮಾಡುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ.
ಅವರು ತಮ್ಮ ಸಂಸ್ಕೃತಿಯ ಗೌರವಾರ್ಥವಾಗಿ ವಿವಿಧ ಉಡುಪುಗಳನ್ನು ಧರಿಸಿರುವ ವಿದ್ಯಾರ್ಥಿಗಳಿಂದ ಸುತ್ತುವರೆದಿರುವುದನ್ನು ಕಾಣಬಹುದು. ಧೋಲ್ ನುಡಿಸಲು ಪ್ರಾರಂಭಿಸಿದ ನಂತರ, ಎಲ್ಲಾ ವಿದ್ಯಾರ್ಥಿಗಳು ತಮ್ಮ ದೇಶಗಳ ಧ್ವಜಗಳೊಂದಿಗೆ ನೃತ್ಯಕ್ಕೆ ಸೇರುತ್ತಾರೆ. ಈ ವೇಳೆ ಆಂಗ್ಲ ವಿದ್ಯಾರ್ಥಿಯೊಬ್ಬ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾನೆ.
ವಿದ್ಯಾರ್ಥಿಗಳ ನೃತ್ಯದ ಈ ವಿಡಿಯೋ 2.1 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಧೋಲ್ ಬಾರಿಸಿದಾಗ ಅದರ ಶಬ್ಧವನ್ನು ವಿರೋಧಿಸುವುದು ಅಸಾಧ್ಯ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಬಹಳ ಅದ್ಭುತವಾಗಿದೆ ಎಂದು ಪ್ರತಿಕ್ರಿಯಿಸಿದ್ರು.
https://youtu.be/5DVHzuFnFlk