ಲಂಡನ್: ಇಂಗ್ಲೆಂಡ್ ನಲ್ಲಿ ಸಿಂಗಲ್ ಡೋರ್ ಕೊರೋನಾ ಲಸಿಕೆ ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲಸಿಕೆಯನ್ನು ಬಳಸಲು ಇಂಗ್ಲೆಂಡ್ ಒಪ್ಪಿಗೆ ಸೂಚಿಸಿದೆ.
ಸಿಂಗಲ್ ಡೋರ್ ಲಸಿಕೆ ಶೇಕಡ 85 ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಎರಡು ಕೋಟಿ ಲಸಿಕೆಗೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ ಇಂಗ್ಲೆಂಡ್ ಆರ್ಡರ್ ಮಾಡಿದೆ ಇಂಗ್ಲೆಂಡ್ ನಲ್ಲಿ ಈಗ ನಾಲ್ಕನೇ ಕೋವಿಡ್ ಲಸಿಕೆ ಜನರಿಗೆ ಲಭ್ಯವಾಗಿದೆ.
ಇದು ಯುಕೆನ ಅತ್ಯಂತ ಯಶಸ್ವಿ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ, ಈಗಾಗಲೇ 13,000 ಕ್ಕೂ ಹೆಚ್ಚು ಜೀವಗಳನ್ನು ಉಳಿಸಿದೆ. ಭೀಕರವಾದ ವೈರಸ್ ನಿಂದ ಜನರನ್ನು ರಕ್ಷಿಸಲು ನಾಲ್ಕು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳ ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಹೇಳಿದ್ದಾರೆ.