ನವದೆಹಲಿ : ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅನೇಕ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ. ಬಡವರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲೆಂದೇ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಾರಂಭಿಸಲಾಗಿತ್ತು. 2016ರಲ್ಲೇ ಈ ಯೋಜನೆಗೆ ಚಾಲನೆ ಸಿಕ್ಕಿದೆ. ಗ್ರಾಮೀಣ ಮತ್ತು ಹಿಂದುಳಿದ ಮನೆಗಳಿಗೆ LPG ಯಂತಹ ಶುದ್ಧ ಅಡುಗೆ ಇಂಧನವನ್ನು ಒದಗಿಸಲಾಗ್ತಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಬೆಂಬಲಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಫಲಾನುಭವಿಗಳಿಗೆ ದ್ರವೀಕೃತ ಪೆಟ್ರೋಲಿಯಂ ಅನಿಲ ಸಿಲಿಂಡರ್ಗಳ ಮೇಲೆ ಒಟ್ಟು 300 ರೂ.ಗಳ ಹೆಚ್ಚುವರಿ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಈಗ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು ಬ್ಯಾಂಕ್ ಖಾತೆಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದ ಖಾತೆಗೆ ಸಬ್ಸಿಡಿ ಸಿಗುವುದಿಲ್ಲ. ಹೀಗಾಗಿ ಇದುವರೆಗೆ ಬ್ಯಾಂಕ್ ನಲ್ಲಿ ಇರುವ ನಿಮ್ಮ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ತಕ್ಷಣವೇ ಬ್ಯಾಂಕ್ ಗೆ ಹೋಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ, ಇಲ್ಲದಿದ್ದರೆ ನಿಮ್ಮ ಖಾತೆಗೆ ಗ್ಯಾಸ್ ಸಬ್ಸಿಡಿ ಹಣ ಬರಲ್ಲ.
ಉಜ್ವಲ್ ಯೋಜನೆಯಡಿ ಮೂರನೇ ಹಂತದ ಎಲ್.ಪಿ.ಜಿ ಸಂಪರ್ಕ ಪಡೆಯುವ ಗ್ರಾಹಕರಿಗೆ ಎರಡು ಬರ್ನರ್ ಸ್ಟೌವ್, 14.2 ಕೆ.ಜಿ ಸಿಲಿಂಡರ್ ಮತ್ತು ಎರಡು 5 ಕೆ.ಜಿ ಸಿಲಿಂಡರ್, ಒಂದು ರೆಗ್ಯುಲೇಟರ್, ಒಂದು ಸುರಕ್ಷಾ ಹೋಸ್, ಡಿ.ಜಿ.ಸಿ.ಸಿ ಬುಕ್‍ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಇದುವರೆಗೂ ಎಲ್.ಪಿ.ಜಿ ಅನಿಲ ಸಂಪರ್ಕಗಳನ್ನು ಹೊಂದಿರದ ಕುಟುಂಬದ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಎಲ್.ಪಿ.ಜಿ ವಿತರಕ ಕಂಪನಿಗೆ ಭೇಟಿ ನೀಡಿ ಸೌಲಭ್ಯವನ್ನು ಪಡೆಯಬಹುದು ಮತ್ತು ಕ್ಯೂ.ಆರ್.ಕೋಡ್ ಮೂಲಕ ಯೋಜನೆ ಮಾಹಿತಿ ಪಡೆಯಬಹುದಾಗಿದೆ