alex Certify UIDAI update​: ಆಧಾರ್​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UIDAI update​: ಆಧಾರ್​ ಕಾರ್ಡ್​ನಲ್ಲಿ ಫೋಟೋ ಬದಲಾಯಿಸಲು ಇಲ್ಲಿದೆ ಟಿಪ್ಸ್

ಆಧಾರ್​ ಕಾರ್ಡ್​ ಇಂದು ಪ್ರಮುಖ ಗುರುತಿನ ದಾಖಲೆಯಾಗಿದೆ. ಶಾಲಾ ಪ್ರವೇಶಗಳನ್ನು ಪಡೆಯುವುದು, ಬ್ಯಾಂಕ್​ ಖಾತೆಗಳನ್ನು ತೆರೆಯುವುದು ಸೇರಿದಂತೆ ಹಲವು ಕಾರ್ಯಗಳನ್ನು ಪೂರ್ಣಗೊಳಿಸಲು ಇದು ಅವಶ್ಯಕ. ಆಧಾರ್​ ಕಾರ್ಡ್​ ಬಯೋಮೆಟ್ರಿಕ್ಸ್​ನ ದೃಢೀಕೃತ ಮಾಹಿತಿ ಒಳಗೊಂಡಿರುವ ಜೊತೆಗೆ ಪ್ರಮುಖ ವೈಯಕ್ತಿಕ ಮಾಹಿತಿಯನ್ನು ದಾಖಲಿಸಲಾಗಿದೆ.

ಯುಐಡಿಎಐ ತನ್ನ ಆನ್​ಲೈನ್​ ಪೋರ್ಟಲ್​ ಮೂಲಕ ಈಗಾಗಲೇ ನಮೂದಿಸಿರುವ ತಮ್ಮ ವೈಯಕ್ತಿಕ ಮಾಹಿತಿಯನ್ನು ಆನ್​ಲೈನ್​ನಲ್ಲಿ ನವೀಕರಿಸಲು ಸಹಾಯ ಮಾಡುತ್ತದೆ.

ನಿಮ್ಮ ಆಧಾರ್​ ಕಾರ್ಡ್​ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಬಯಸಿದರೆ, ನೀವು ಯುಐಡಿಎಐ ಅನ್ನು ಸಂಪರ್ಕಿಸಬೇಕು. ಹೆಸರು, ವಿಳಾಸ, ಮೊಬೈಲ್​ ಸಂಖ್ಯೆ, ಭಾವಚಿತ್ರ ಮತ್ತು ಇಮೇಲ್​ ಐಡಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಬಹುದು.

ನಮ್ಮಲ್ಲಿ ಅನೇಕರು ಆಧಾರ್​ ಕಾರ್ಡ್​ನಲ್ಲಿರುವ ನಮ್ಮ ಪ್ರಸ್ತುತ ಫೋಟೋ ಇಷ್ಟಪಡುವುದಿಲ್ಲ. ಈ ಹಿಂದೆ ಮಾಡಿದ ಆಧಾರ್​ ಕಾರ್ಡ್​ಗೆ ಸ್ಮಾರ್ಟ್​ ಫೋಟೋವನ್ನು ನವೀಕರಿಸಲು ಬಯಸಿದರೆ, ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸಬಹುದು.

ಯುಐಡಿಎಐ ವೆಬ್​ಸೈಟ್​ uidai.gov.in ಗೆ ಭೇಟಿ ನೀಡಿ

ಆಧಾರ್​ ನೋಂದಣಿ ಫಾರ್ಮ್​ ಅನ್ನು ಡೌನ್​ಲೋಡ್​ ಮಾಡಿ.

ಅಗತ್ಯವಿರುವ ಎಲ್ಲಾ ವಿವರಗಳನ್ನು ಫಾರ್ಮ್‌ನಲ್ಲಿ ಸಲ್ಲಿಸಿ.

ಆಧಾರ್​ ನೋಂದಣಿ ಕೇಂದ್ರಕ್ಕೆ ಹೋಗಿ ಮತ್ತು ನಮೂನೆಯನ್ನು ಸಲ್ಲಿಸಿ.

ನಿಮ್ಮ ಹೊಸ ಫೋಟೋವನ್ನು ಇಲ್ಲಿ ತೆಗೆದುಕೊಳ್ಳಬಹುದು.

ನೀವು ಜಿಎಸ್ಟಿ ಜೊತೆಗೆ 100 ರೂ. ಪಾವತಿಸಿ

ಇದರ ನಂತರ, ನೀವು ಸ್ವೀಕೃತಿ ಸ್ಲಿಪ್​ ಮತ್ತು ನವೀಕರಣ ವಿನಂತಿ ಸಂಖ್ಯೆ ಸ್ವೀಕರಿಸುತ್ತೀರಿ.

ಈ ಸಂಖ್ಯೆ ಮೂಲಕ ನಿಮ್ಮ ಆಧಾರ್​ ಕಾರ್ಡ್​ನ ನವೀಕರಣವನ್ನು ನೀವು ಟ್ರಾಕ್​ ಮಾಡಬಹುದು.

ಈ ನವೀಕರಣವು 90 ದಿನಗಳವರೆಗೆ ತೆಗೆದುಕೊಳ್ಳಬಹುದು. ಆಧಾರ್​ ಕಾರ್ಡ್​ಗಾಗಿ ನಿಮ್ಮ ಫೋಟೋ ಕ್ಲಿಕ್​ ಮಾಡಲು ನೀವು ಆಧಾರ್​ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...