alex Certify ʼಆಧಾರ್‌ʼ ನಿಯಮ ಉಲ್ಲಂಘಿಸುವವರ ವಿರುದ್ದ UIDAI ಕ್ರಮಕ್ಕೆ ಕೇಂದ್ರ ಸರ್ಕಾರದ ಗ್ರೀನ್‌ ಸಿಗ್ನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್‌ʼ ನಿಯಮ ಉಲ್ಲಂಘಿಸುವವರ ವಿರುದ್ದ UIDAI ಕ್ರಮಕ್ಕೆ ಕೇಂದ್ರ ಸರ್ಕಾರದ ಗ್ರೀನ್‌ ಸಿಗ್ನಲ್

ಆಧಾರ್‌ ಕಾರ್ಡಿನ ಮಾತೃ ಸಂಸ್ಥೆಯಾದ ’ವಿಶಿಷ್ಟ ಗುರುತು ಪ್ರಾಧಿಕಾರ’ಕ್ಕೆ ತನ್ನ ನಿಯಮಗಳನ್ನು ಉಲ್ಲಂಘಿಸುವವರಿಗೆ ಗರಿಷ್ಠ 1 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ಅಧಿಕಾರವನ್ನು ಕೇಂದ್ರ ಸರ್ಕಾರವು ನೀಡಿದೆ.

ನ.2 ರಂದು ಈ ಮಹತ್ವದ ಅಧಿಕಾರ ನೀಡಲಾಗಿರುವ ಕುರಿತು ಸರ್ಕಾರದಿಂದ ಪ್ರಕಟಣೆ ಹೊರಬಿದ್ದಿದೆ. ಯುಐಡಿಎಐ ಜತೆಗೆ ನಿಕಟವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು/ವ್ಯಕ್ತಿಗಳು ಅಗತ್ಯವಾದ ಮಾಹಿತಿ ಹಂಚಿಕೆಗೆ ನಿರಾಕರಿಸಿದಲ್ಲಿ, ಅಂಥವರ ವಿರುದ್ಧ ವಿಶಿಷ್ಟ ಗುರುತು ಪ್ರಾಧಿಕಾರವು ಕ್ರಮ ಜರುಗಿಸಲು ಹೊಸ ಅಧಿಕಾರವು ಸಹಾಯಕವಾಗಿದೆ.

2021ರ ಯುಐಡಿಎಐ ನಿಯಮಗಳು (ದಂಡ ವಿಧಿಸುವಿಕೆ) ಕಾನೂನುಗಳ ಅಡಿಯಲ್ಲಿ ಹೊಸ ಅಧಿಕಾರವು ಪ್ರಾಧಿಕಾರಕ್ಕೆ ಸಿಕ್ಕಿದೆ. ಇದಕ್ಕೆ ಪೂರಕವಾದ ‘ದಿ ಆಧಾರ್‌ ಮತ್ತು ಇತರ ಕಾನೂನುಗಳು (ತಿದ್ದುಪಡಿ) ವಿಧೇಯಕ ‘ ವನ್ನು 2019ರಲ್ಲೇ ಸಂಸತ್ತಿನಲ್ಲಿ ಅನುಮೋದಿಸಲಾಗಿತ್ತು.

GOOD NEWS: ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರದಿಂದಲೂ ಜನತೆಗೆ ದೀಪಾವಳಿ ಗಿಫ್ಟ್

ಆಧಾರ್‌ ಮಾಹಿತಿ ದುರ್ಬಳಕೆಗೆ ಯತ್ನಿಸುವವರಾಗಲಿ, ಯುಐಡಿಎಐಗೆ ಅಸಹಕಾರ ನೀಡುವ ಸಂಸ್ಥೆಗಳಾಗಲಿ, ಅವರ ವಿರುದ್ಧದ ದೂರುಗಳ ಇತ್ಯರ್ಥಕ್ಕೆ ನಿರ್ಣಾಯಕ ಅಧಿಕಾರಿಗಳನ್ನು ಯುಐಡಿಎಐ ನೇಮಿಸಬಹುದಾಗಿದೆ. ಅವರು ವಿಚಾರಣೆ ನಡೆಸಿದ ಬಳಿಕ ಗರಿಷ್ಠ 1 ಕೋಟಿ ರೂ.ವರೆಗೆ ದಂಡ ಹೇರಲು ಅವಕಾಶವನ್ನು ಹೊಸ ನಿಯಮವು ಕಲ್ಪಿಸುತ್ತದೆ. ನಿರ್ಣಾಯಕ ಅಧಿಕಾರಿಯ ವಿರುದ್ಧ ದೂರುಗಳಿದ್ದಲ್ಲಿ ಟೆಲಿಕಾಂ ವ್ಯಾಜ್ಯ ಇತ್ಯರ್ಥ ಮತ್ತು ದೂರು ನೀಡುವ ನ್ಯಾಯಾಧೀಕರಣದ ಮೊರೆ ಹೋಗಲು ಅವಕಾಶವಿದೆ.

ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗಿಂತ ಕೆಳಗಿನವರು ನಿರ್ಣಾಯಕ ಅಧಿಕಾರಿ ಆಗಕೂಡದು ಎಂದು ನಿಯಮ ಸ್ಪಷ್ಟವಾಗಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...