alex Certify ಯಾವುದೇ ದಾಖಲೆಗಳಿಲ್ಲದೆ ಹೋದ್ರೂ ತಯಾರಿಸಬಹುದು ‘ಆಧಾರ್ ಕಾರ್ಡ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವುದೇ ದಾಖಲೆಗಳಿಲ್ಲದೆ ಹೋದ್ರೂ ತಯಾರಿಸಬಹುದು ‘ಆಧಾರ್ ಕಾರ್ಡ್’

ಆಧಾರ್ ಕಾರ್ಡ್ ಈಗ ಅನಿವಾರ್ಯವಾಗಿದೆ. ಅಗತ್ಯ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಮೊದಲ ಸ್ಥಾನ ಪಡೆದಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಮೊಬೈಲ್ ಸಿಮ್ ಪಡೆಯುವವರೆಗೆ ಎಲ್ಲ ಸೇವೆಗಳಿಗೆ ಆಧಾರ್ ಅವಶ್ಯಕ. ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರು, ವಿಳಾಸದ ಪುರಾವೆ, ಹುಟ್ಟಿದ ದಿನಾಂಕ ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಬೇಕು. ಆದರೆ ಈ ದಾಖಲೆಗಳಿಲ್ಲದೆ ಆಧಾರ್ ಕಾರ್ಡ್ ಪಡೆಯಬಹುದು.

ಗುರುತಿನ ಚೀಟಿ ಮತ್ತು ವಿಳಾಸ ಪುರಾವೆಗಳಂತಹ ದಾಖಲೆಗಳು ಇಲ್ಲದ ಸಂದರ್ಭದಲ್ಲಿ ಯುಐಡಿಎಐ ಸೌಲಭ್ಯದ ಸಹಾಯ ಪಡೆಯಬಹುದು. ಯುಐಡಿಎಐ Aadhaar Introducer ಸೌಲಭ್ಯ ನೀಡ್ತಿದೆ. ಐಡಿ ಅಥವಾ ವಿಳಾಸ ಪುರಾವೆ ಇಲ್ಲದ ಸ್ಥಳೀಯ ನಿವಾಸಿಗಳಿಗೆ ಇವರು ನೆರವಾಗಲಿದ್ದಾರೆ. ಹುಟ್ಟಿದ ದಿನಾಂಕ, ಗುರುತು ಅಥವಾ ವ್ಯಕ್ತಿಗಳ ವಿಳಾಸವನ್ನು ಪ್ರತ್ಯೇಕವಾಗಿ ಪರಿಶೀಲಿಸುತ್ತಾರೆ.

ಯುಐಡಿಎಐ ಹೊರಡಿಸಿದ ಸುತ್ತೋಲೆಯ ಪ್ರಕಾರ, Aadhaar Introducer, ಅರ್ಜಿದಾರರ ಹೆಸರಿನಲ್ಲಿ ಪ್ರಮಾಣಪತ್ರವನ್ನು ನೀಡಬೇಕು. ಇದರ ವ್ಯಾಲಿಡಿಟಿ ಕೇವಲ 3 ತಿಂಗಳಿರುತ್ತದೆ. Aadhaar Introducer, ದಾಖಲಾತಿ ನಮೂನೆಗೆ ಸಹಿ ಮಾಡಬೇಕು.

Aadhaar Introducer ಆಗ ಬಯಸುವ ವ್ಯಕ್ತಿ ವಯಸ್ಸು 18 ವರ್ಷಗಳಿಗಿಂತ ಹೆಚ್ಚಿರಬೇಕು. ಯಾವುದೇ ಪ್ರಕರಣ ಇರಬಾರದು. ಆಧಾರ್ ಕಾರ್ಡ್ ಹೊಂದಿರಬೇಕು. ಆಯಾ ಪ್ರದೇಶದ ಸ್ಥಳೀಯ ವ್ಯಕ್ತಿ, ಪೋಸ್ಟ್ ಮ್ಯಾನ್, ಆಶಾ ಕಾರ್ಯಕರ್ತೆ, ಶಿಕ್ಷಕರು ಸಹ Aadhaar Introducer  ಆಗಬಹುದು.

ಆಧಾರ್ ಕಾರ್ಡ್ ಮಾಡಲು ಅಗತ್ಯವಾದ ದಾಖಲೆಗಳನ್ನು ಹೊಂದಿಲ್ಲದಿದ್ದರೆ, ಕುಟುಂಬದ ಮುಖ್ಯಸ್ಥರ ಅಥವಾ ಈಗಾಗಲೇ ಆಧಾರ್ ಕಾರ್ಡ್ ಹೊಂದಿರುವವರ ಸಹಾಯವನ್ನೂ ನೀವು ಪಡೆಯಬಹುದು. ಆ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವನ್ನು ಸಾಬೀತುಪಡಿಸುವ ಡಾಕ್ಯುಮೆಂಟ್ ಇರಬೇಕು. ಕುಟುಂಬದ ಪಡಿತರ ಚೀಟಿಯಲ್ಲಿ ಹೆಸರಿರಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...