ವರದಕ್ಷಿಣೆಯು ಪಿಡುಗೆಂಬುದು ಸರ್ವವಿಧಿತ. ಈ ಪದ್ಧತಿಯನ್ನು ನಿಷೇಧಿಸುವ ಕಾನೂನುಗಳ ಹೊರತಾಗಿಯೂ ಅನಿಷ್ಟವು ಭಾರತದಲ್ಲಿ ಇನ್ನೂ ಹಾಸುಹೊಕ್ಕಾಗಿದೆ. ಅಸಹಾಯಕ ಯುವತಿಯರು ಮತ್ತು ಅವರ ಕುಟುಂಬಗಳನ್ನು ವರದಕ್ಷಿಣೆ ಪದ್ಧತಿ ಪೀಡಿಸುತ್ತಲೇ ಇದೆ.
ಈ ನಡುವೆ ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿ ವರದಕ್ಷಿಣೆಯನ್ನು ಸಮರ್ಥಿಸುವ ಮತ್ತು ಅದರ ಅರ್ಹತೆ ಮತ್ತು ಪ್ರಯೋಜನಗಳನ್ನು ಪಟ್ಟಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಎರಡನೇ ಮದುವೆಯಾಗ್ತಿದ್ದ ಭೂಪನಿಗೆ ಹಿಗ್ಗಾಮುಗ್ಗಾ ಥಳಿಸಿದ ಮೊದಲ ಪತ್ನಿ, ಸಂಬಂಧಿಕರು
ನರ್ಸಿಂಗ್ ಕೋರ್ಸ್‌ನಲ್ಲಿನ ಸಮಾಜಶಾಸ್ತ್ರ ಪಠ್ಯದಲ್ಲಿ ಇಂಥದ್ದೊಂದು ಅವಘಡ ನಡೆದಿದ್ದು, ಟಿ.ಕೆ ಇಂದ್ರಾಣಿ ಇದನ್ನು ರಚಿಸಿದ್ದಾರೆ. “ವರದಕ್ಷಿಣೆಯ ಉಪಯೋಗಗಳು” ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಈ ಅಂಶಗಳು ಬರುತ್ತವೆ.
– ಹಾಸಿಗೆ, ಟಿವಿ, ಪೀಠೋಪಕರಣಗಳು ಮತ್ತು ವಾಹನಗಳೊಂದಿಗೆ ಹೊಸ ಮನೆ ಪ್ರವೇಶಿಸಲು ಅನುಕೂಲವಾಗಲಿದೆ.
– ಹೆಣ್ಣುಮಕ್ಕಳು ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಸಮರ್ಥಿಸುತ್ತದೆ.
– ವರದಕ್ಷಿಣೆ ಪದ್ಧತಿಯ ಪರೋಕ್ಷ ಪ್ರಯೋಜನವೆಂದರೆ, ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಪ್ರಾರಂಭಿಸಿದ್ದಾರೆ, ಆದ್ದರಿಂದ ಅವರು ಕಡಿಮೆ ವರದಕ್ಷಿಣೆ ನೀಡಬಹುದು.
– ವರದಕ್ಷಿಣೆ ವ್ಯವಸ್ಥೆಯು ‘ಕುರೂಪವಾಗಿ ಕಾಣುವ ಹುಡುಗಿಯರನ್ನು’ ಮದುವೆಯಾಗಲು ಸಹಾಯ ಮಾಡುತ್ತದೆ.
ಪಠ್ಯದಲ್ಲಿರುವ ಈ ಅಂಶವನ್ನು ಗಮನಿಸಿದ ನೆಟ್ಟಿಗರು ಹರಿಹಾಯ್ದಿದ್ದಾರೆ. ವರದಕ್ಷಿಣೆಯನ್ನು ಸಮರ್ಥಿಸುವುದು ಸರಿಯಲ್ಲ ಎಂದು ಹಲವರು ಹರಿಹಾಯ್ದಿದ್ದಾರೆ.
https://twitter.com/Chandlerstan_/status/1510894014576607233?ref_src=twsrc%5Etfw%7Ctwcamp%5Etweetembed%7Ctwterm%5E1510894014576607233%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-news-ugly-girls-can-be-married-off-sociology-book-lists-merits-of-dowry-triggers-twitter-outrage-5319003%2F