ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) 11 ವಿಶ್ವವಿದ್ಯಾಲಯಗಳಿಗೆ ಮುಕ್ತ, ದೂರಶಿಕ್ಷಣ ಕೋರ್ಸ್ ಒದಗಿಸಲು ಅನುಮತಿ ನೀಡಿದೆ.
11 ವಿಶ್ವವಿದ್ಯಾಲಯದ ಪಟ್ಟಿಯನ್ನು ಯುಜಿಸಿ ಬಿಡುಗಡೆ ಮಾಡಿದೆ. ಜೂನ್ ಹಾಗೂ ಜುಲೈನಲ್ಲಿ ನಡೆದ ಆಯೋಗದ ಸ್ಥಾಯಿ ಮೇಲ್ಮನವಿ ಸಮಿತಿಯ ಸಭೆಗಳ ನಂತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ಬಿಡುಗಡೆಯಾದ ಪಟ್ಟಿಯ ಜೊತೆಗೆ, ಈ ಶೈಕ್ಷಣಿಕ ವರ್ಷದಿಂದ 2025-26ರ ವರೆಗೆ ಮಾನ್ಯತೆ ಪಡೆದ ಮುಕ್ತ ಹಾಗೂ ದೂರಶಿಕ್ಷಣ (ಒಡಿಎಲ್) ಕಾರ್ಯಕ್ರಮಗಳನ್ನು ನೀಡಬೇಕು.
ಹನ್ನೊಂದು ವಿವಿಗಳು 2025-26ರ ವರೆಗಿನ ಒಡಿಎಲ್ ಕಾರ್ಯಕ್ರಮಗಳನ್ನು ಒದಗಿಸುವುದಕ್ಕಾಗಿ ಯುಜಿಸಿ ಮಾನ್ಯತೆ ಪಡೆದಿವೆ. ಇವುಗಳಲ್ಲಿ ಗುಜರಾತ್, ಕರ್ನಾಟಕ, ಪಾಂಡಿಚೇರಿ ಮತ್ತು ರಾಜಸ್ಥಾನದಿಂದ ತಲಾ ಒಂದು, ಮಧ್ಯಪ್ರದೇಶ ಮತ್ತು ತಮಿಳುನಾಡಿನಿಂದ ಎರಡು ಹಾಗೂ ಪಶ್ಚಿಮ ಬಂಗಾಳದಿಂದ ಮೂರು ಸೇರಿವೆ.
BIG NEWS: ಸುಳ್ಳು ಸುದ್ದಿ ಬಿತ್ತರಿಸುವ ವೆಬ್ ಪೋರ್ಟಲ್, ಯುಟ್ಯೂಬ್ ಚಾನೆಲ್ ಗಳ ವಿರುದ್ಧ ʼಸುಪ್ರೀಂʼ ಕಳವಳ
ಆಯೋಗವು ತನ್ನ ಜುಲೈ 1ರ ಸಭೆಯಲ್ಲಿ ಮುಕ್ತ ಹಾಗೂ ದೂರಶಿಕ್ಷಣದ ಕಾರ್ಯಕ್ರಮಗಳಿಗಾಗಿ ಜುಲೈ 2021ರ ಶೈಕ್ಷಣಿಕ ವರ್ಷವು 2021ರ ನವೆಂಬರ್ ನಿಂದ ಆರಂಭವಾಗಲಿದ್ದು, ಪ್ರವೇಶಕ್ಕೆ ಡಿಸೆಂಬರ್ 15 ಕೊನೆಯ ದಿನಾಂಕ ಎಂದು ನಿರ್ಧರಿಸಿದೆ.
ಮಾನ್ಯತೆ ಪಡೆದ ವಿವಿಗಳ ಪಟ್ಟಿಯೊಂದಿಗೆ, ಯುಜಿಸಿ ಮಾನ್ಯತೆ ಪಡೆದ ಕಾರ್ಯಕ್ರಮಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಹಾಗೂ ಗುರುತಿಸದ ಯಾವುದೇ ಒಡಿಎಲ್ ಕಾರ್ಯಕ್ರಮಗಳನ್ನು ಪ್ರಾರಂಭಿಸಬಾರದು ಮತ್ತು ಮಾನ್ಯತೆಯ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಅಂತಹ ಕಾರ್ಯಕ್ರಮಗಳಿಗೆ ಸೇರಿಸಿಕೊಳ್ಳಬಾರದು ಎಂದು ಯುಜಿಸಿ ಹೇಳಿದೆ. ಈ ಹಿಂದೆ, ಯುಜಿಸಿ ಆನ್ ಲೈನ್ ಪದವಿ ಕೋರ್ಸ್ ಗಳನ್ನು ನೀಡುವ 38 ವಿವಿಗಳ ಪಟ್ಟಿಯನ್ನು ಅನುಮೋದಿಸಿ ಬಿಡುಗಡೆ ಮಾಡಿತ್ತು.