ನವದೆಹಲಿ: ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಗೆ ಐಚ್ಛಿಕ ವಿಷಯದ ಮಾನ್ಯತೆ ನೀಡಲಾಗಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್.ಸಿ.ಸಿ. ತರಬೇತಿಯನ್ನು ಐಚ್ಛಿಕ ವಿಷಯವಾಗಿ ಅಳವಡಿಸಲು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಯುಜಿಸಿ ನಿರ್ದೇಶನ ನೀಡಿದೆ.
ಎನ್.ಸಿ.ಸಿ.ಯನ್ನು ಇದುವರೆಗೆ ಕೇವಲ ತರಬೇತಿಗಾಗಿ ಕಲಿಸಲಾಗುತ್ತಿತ್ತು. ಆಸಕ್ತಿ ಇರುವವರು ಮಾತ್ರ ನೋಂದಾಯಿಸಿಕೊಳ್ಳುತ್ತಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಇನ್ನು ಮುಂದೆ ಆಯ್ಕೆ ಆಧಾರಿತ ಕ್ರೆಡಿಟ್ ಸಿಸ್ಟಮ್ ಭಾಗವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಎನ್.ಸಿ.ಸಿ. ಐಚ್ಛಿಕ ವಿಷಯವಾಗಿ ಕಲಿಸಲು ಯುಜಿಸಿಯಿಂದ ಸೂಚನೆ ನೀಡಲಾಗಿದೆ.