ಹೆರಾಯಿನ್ ತುಂಬಿದ್ದ ಕ್ಯಾಪ್ಸೂಲ್ ನುಂಗಿ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಉಗಾಂಡದ ಮಹಿಳೆಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಏಪ್ರಿಲ್ 14 ರಂದು ದೋಹಾ ವಿಮಾನದಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಕೆಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮಾನದ ಮೇಲೆ ತಪಾಸಣೆ ಮಾಡಿದ್ದಾರೆ.
ಆಕೆಯ ಲಗೇಜ್ ಗಳನ್ನು ತಪಾಸಣೆ ಮಾಡಿದಾಗ ಅನುಮಾನಾಸ್ಪದ ವಸ್ತುಗಳು ಸಿಗಲಿಲ್ಲ. ಆದರೆ, ತಪಾಸಣಾಧಿಕಾರಿಗಳ ಅನುಮಾನ ಪರಿಹಾರವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ದೇಹದೊಳಗೆ ಒಂದು ರೀತಿಯ ವಸ್ತುವಿರುವುದು ಕಂಡುಬಂದಿತು.
BIG NEWS: ಪಾಕ್ ನಲ್ಲಿ 10 ದಿನಗಳಲ್ಲಿ 2 ಪೋಲಿಯೋ ಪ್ರಕರಣ ಪತ್ತೆ
ತೀವ್ರ ಪರೀಕ್ಷೆಗೆ ಒಳಪಡಿಸಿದಾಗ ದೇಹದೊಳಗೆ 887 ಗ್ರಾಂ ತೂಕದ ಹೆರಾಯಿನ್ ಇದ್ದ 126 ಕ್ಯಾಪ್ಸೂಲ್ ಗಳು ಇರುವುದು ಪತ್ತೆಯಾಯಿತು. ಈ ಹೆರಾಯಿನ್ ನ ಮಾರುಕಟ್ಟೆ ದರ 6.65 ಕೋಟಿ ರೂಪಾಯಿ ಮತ್ತು ಆಕೆಯನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.