
ಬೆಂಗಳೂರು: ಹಬ್ಬಗಳು, ಸಾಲು ಸಾಲು ರಜೆ ಬಮ್ತೆಂದರೆ ಖಾಸಗಿ ಬಸ್ ಗಳು ಪ್ರಯಾಣದರ ಹೆಚ್ಚಿಸುವ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡುವುದು ಸಹಜ ಎಂಬಂತಾಗಿದೆ. ಇದೀಗ ಯುಗಾದಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮೂರು ದಿನಗಳ ರಜೆ ಇರುವುದರಿಂದ ಊರುಗಳಿಗೆ ಹೋಗುವವರಿಗೆ ಖಾಸಗಿ ಬಸ್ ದರ ಏರಿಕೆ ಬಿಸಿ ತಟ್ಟಲಿದೆ.
ಮಾರ್ಚ್ 29ರಂದು ಯುಗಾದಿ ಹಬ್ಬದ ಅಮಾವಾಸ್ಯೆ ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್ ಹಿನ್ನೆಲೆಯಲ್ಲಿ ಸಾಲು ಸಾಅಲು ರಜೆ ಇರುವುದರಿಂದ ಮಾರ್ಚ್ 28 ರಾತ್ರಿ ಶುಕ್ರವಾರ ಊರಿಗೆ ತೆರಳಲು ಜನರು ಪ್ಲಾನ್ ಮಾಡಿರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಖಾಸಗಿ ಬಸ್ಗಳು ದುಪ್ಪಟ್ಟು ದರ ಏರಿಕೆ ಮಾಡಿದ್ದಾರೆ.
ಬೆಂಗಳೂರಿನಿಂದ ಯಾವ ಊರಿಗೆ ಎಷ್ಟು ಬಸ್ ಟಿಕೆಟ್ ದರ ಇಲ್ಲಿದೆ ಮಾಹಿತಿ
ಬೆಂಗಳೂರು-ದಾವಣಗೆರೆ
ಪ್ರಸ್ತುತ ದರ = 450 ರೂ-1300 ರೂ- ಹಬ್ಬದ ದರ = 750ರೂ-5500ರೂ
ಬೆಂಗಳೂರು-ಧಾರವಾಡ
ಪ್ರಸ್ತುತ ದರ = 600ರೂ -1100ರೂ-ಹಬ್ಬದ ದರ = 1069ರೂ-5500 ರೂ
ಬೆಂಗಳೂರು – ಹುಬ್ಬಳ್ಳಿ
ಪ್ರಸ್ತುತ ದರ=475 ರೂ-1100ರೂ- ಹಬ್ಬದ ದರ=1200ರೂ-4200ರೂ
ಬೆಂಗಳೂರು-ಬೆಳಗಾವಿ
ಪ್ರಸ್ತುತ ದರ=389ರೂ-1200ರೂ- ಹಬ್ಬದ ದರ=1129ರೂ-5500ರೂ
ಬೆಂಗಳೂರು-ಮಂಗಳೂರು
ಪ್ರಸ್ತುತ ದರ=650ರೂ-1300ರೂ- ಹಬ್ಬದ ದರ=1200ರೂ-4500ರೂ
ಬೆಂಗಳೂರು-ಕಲ್ಬುರ್ಗಿ
ಪ್ರಸ್ತುತ ದರ=750ರೂ-1000ರೂ- ಹಬ್ಬದ ದರ=1200ರೂ-2200 ರೂ
ಬೆಂಗಳೂರು-ರಾಯಚೂರು
ಪ್ರಸ್ತುತ ದರ=650 ರೂ-990 ರೂ-ಹಬ್ಬದ ದರ=1100ರೂ-2990 ರೂ
ಬೆಂಗಳೂರು-ಹಾಸನ
ಪ್ರಸ್ತುತ ದರ=463ರೂ -1000ರೂ- ಹಬ್ಬದ ದರ=750ರೂ-1600ರೂ
ಬೆಂಗಳೂರು-ಯಾದಗಿರಿ
ಪ್ರಸ್ತುತ ದರ=699ರೂ-900ರೂ-ಹಬ್ಬದ ದರ=1300ರೂ-2200ರೂ
ಬೆಂಗಳೂರು-ಶಿವಮೊಗ್ಗ
ಪ್ರಸ್ತುತ ದರ =500ರೂ-990 ರೂ-ಹಬ್ಬದ ದರ =1199 ರೂ-1800 ರೂ
ಬಸ್ ಪ್ರಯಾಣ ದರ ಏರಿಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ ನಟರಾಜ್ ಶರ್ಮ ಹೇಲುವ ಪ್ರಕಾರ ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಶೇ 50 ರಿಂದ 60 ರಷ್ಟು ಮಾತ್ರ ದರ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.