ದೇಶದಲ್ಲಿ ವಿವಿಧ ಹೆಸರುಗಳಿಂದ ಯುಗಾದಿ ಆಚರಿಸಲಾಗುತ್ತದೆ. ನಾಡಿನಾದ್ಯಂತ ಇಂದು ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಗಣ್ಯರು ಶುಭಾಶಯ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ಯುಗಾದಿ ಶುಭಾಶಯ ಹೇಳಿದ್ದಾರೆ.
ಸೃಷ್ಟಿಯ ಮೊದಲ ದಿನ
ಸೂರ್ಯನ ಕಿರಣದ ಮೊದಲ ದಿನ
ಹಸಿರೆಲೆಗಳು ಚಿಗುರೊಡೆಯುವ ಮೊದಲ ದಿನ
ಶುಭಕೃತು ನಾಮ ಸಂವತ್ಸರದ ಮೊದಲ ದಿನ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಂಕಷ್ಟಗಳೆಲ್ಲವೂ ದೂರವಾಗಿ ಸಮೃದ್ಧಿ ಸದಾ ನಾಡಿನಲ್ಲಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಯುಗಾದಿ ಶುಭಾಶಯ ಹೇಳಿದ್ದಾರೆ. ಯುಗಾದಿಯ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃದಯಪೂರ್ವಕ ಶುಭಾಶಯಗಳು. ಈ ವರ್ಷ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.