alex Certify ಮತ್ತೆ 596 ವೈದ್ಯಕೀಯ ಸೀಟು ಲಭ್ಯ: ಕೆಇಎ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ 596 ವೈದ್ಯಕೀಯ ಸೀಟು ಲಭ್ಯ: ಕೆಇಎ ಮಾಹಿತಿ

ಎರಡನೇ ಸುತ್ತಿನ ಸೀಟು ಹಂಚಿಕೆ ನಂತರ ಉಳಿದಿರುವ 596 ವೈದ್ಯಕೀಯ ಸೀಟುಗಳು ಮಾಪ್ ಆಪ್ ಸುತ್ತಿಗೆ ಲಭ್ಯವಿವೆ. ಇವುಗಳ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಈ ಸೀಟುಗಳನ್ನು ಪಡೆಯಲು ಆಸಕ್ತಿ ಇದ್ದಲ್ಲಿ ಅರ್ಹ ಅಭ್ಯರ್ಥಿಗಳು ಮುಂಚಿತವಾಗಿ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಿ ಯುಜಿ ನೀಟ್ -2024ರ ಆನ್ ಲೈನ್ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ. ಸರ್ಕಾರಿ ಕೋಟಾದ 7, ಖಾಸಗಿ ಕೋಟಾದ 135, ಮ್ಯಾನೇಜ್ಮೆಂಟ್ ಕೋಟಾದ 453, NRI ಕೋಟಾದ ಒಂದು ಸೀಟು ಮಾಪ್ ಅಪ್ ಸುತ್ತಿಗೆ ಲಭ್ಯವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಆನ್ಲೈನ್ ಚಲನ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ವೈದ್ಯಕೀಯ ಕೋರ್ಸ್ ಶುಲ್ಕ ಠೇವಣಿ ಪಾವತಿಸಲು ಅ. 5ರಿಂದ 8ರವರೆಗೆ ಅವಕಾಶ ಇರುತ್ತದೆ. ಅ. 7ರಿಂದ 14 ರವರೆಗೆ ಆಪ್ಷನ್ ದಾಖಲಿಸಲು ಸಮಯ ನೀಡಲಾಗುವುದು. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಅಭ್ಯರ್ಥಿಗೆ ಕಾಲೇಜಿಗೆ ಪ್ರವೇಶ ಪಡೆಯಲು ವಿಫಲವಾದಲ್ಲಿ ಅಥವಾ ರದ್ದುಗೊಳಿಸಲು ಬಯಸಿದಲ್ಲಿ, ಕಾಲೇಜಿಗೆ ವರದಿ ಮಾಡಿಕೊಳ್ಳದಿದ್ದರೆ ಅಭ್ಯರ್ಥಿ ಪಾವತಿಸಿದ ಶುಲ್ಕ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸಲಾಗುವುದು. ಮುಂದಿನ ವರ್ಷಗಳ ವೈದ್ಯಕೀಯ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...