ಕಿಂಬರ್ಲಿ ಗ್ರಾಮೀಣ ಪ್ರದೇಶದ ಜನತೆ ಆಗಸದಲ್ಲಿ ಕೆಲವು ವಿಚಿತ್ರ ದೀಪಗಳನ್ನು ಕಂಡಿದ್ದು, ಅದೀಗ ವಿಶ್ವಾದ್ಯಂತ ಭಾರಿ ವೈರಲ್ ಆಗಿದೆ. ಕತ್ತಲೆಯಾದ ಸಂದರ್ಭದಲ್ಲಿ, ಮೋಡ ಕವಿದ ಆಕಾಶದಲ್ಲಿ ದೀಪಗಳ ಮಿಂಚು ಆ ಪ್ರಕಾಶಗಳು ಹಾರುವ ತಟ್ಟೆಗಳೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು.
ಇದರ ವಿಡಿಯೋ ವೈರಲ್ ಆಗಿದ್ದು, ನಿಗೂಢ ವಸ್ತುವಿನ ಬಗ್ಗೆ ಜನರು ಚಕಿತರಾಗಿದ್ದಾರೆ.
ಏತನ್ಮಧ್ಯೆ, ಕಿಂಬರ್ಲಿಯ ಸ್ಥಳದಿಂದ ಐದು ಮೈಲುಗಳಷ್ಟು ದೂರದಲ್ಲಿದ್ದ ಕೆನ್ ದಂಪತಿ ಮತ್ತೊಂದು ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ, ಆಕಾಶದಲ್ಲಿ ಪ್ರಕಾಶಮಾನವಾದ ದೀಪಗಳನ್ನು ಅವರು ಸೆರೆಹಿಡಿದಿದ್ದಾರೆ.
ಮರುದಿನ, ಕ್ರಿಸ್ ನೌಕ್ ಎಂಬಾತ ಗ್ರೀನ್ಫೀಲ್ಡ್ನಿಂದ ವೆಸ್ಟ್ ಅಲಿಸ್ಗೆ ಚಾಲನೆ ಮಾಡುತ್ತಿದ್ದಾಗ, ಬಿಳಿ ದೀಪಗಳ ಗೆರೆಗಳ ಜೊತೆಗೆ ನೇರಳೆ-ನೀಲಿ ದೀಪಗಳನ್ನು ಗಮನಿಸಿ ರೆಕಾರ್ಡ್ ಮಾಡಿದ್ದಾರೆ. ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಭಾರತದ ಕೆಲವು ಭಾಗ ಅಷ್ಟೇ ಏಕೆ ಕರ್ನಾಟಕದಲ್ಲಿಯೂ ಇದೇ ರೀತಿ ಬೆಳಕು ಕಾಣಿಸಿತ್ತು. ನಂತರ ಇದು ಎಲಾನ್ ಮಸ್ಕ್ ಅವರ ಸ್ಪೇಸ್-ಎಕ್ಸ್ನಿಂದ ಬಿಡಲಾಗಿದ್ದ ಉಪಗ್ರಹ ಎಂದು ಹೇಳಲಾಗಿತ್ತು. ಆದರೆ ಈಗ ಕಿಂಬರ್ಲಿಯ ಬಗ್ಗೆ ಇನ್ನೂ ಮಾಹಿತಿ ನಿಖರವಾಗಲಿಲ್ಲ.