alex Certify BIG NEWS: ಉಡುಪಿಯ ಲ್ಯಾಬ್, ಕ್ಲಿನಿಕ್ ಗಳ ಮೇಲೆ ದಾಳಿ; ನಕಲಿ ವೈದ್ಯರು, ಅನುಮತಿ ಇಲ್ಲದ ಕ್ಲಿನಿಕ್ ಗಳು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಡುಪಿಯ ಲ್ಯಾಬ್, ಕ್ಲಿನಿಕ್ ಗಳ ಮೇಲೆ ದಾಳಿ; ನಕಲಿ ವೈದ್ಯರು, ಅನುಮತಿ ಇಲ್ಲದ ಕ್ಲಿನಿಕ್ ಗಳು ಪತ್ತೆ

ಉಡುಪಿ: ರಾಜ್ಯದ ಹಲವೆಡೆ ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿರುವ ಬೆನ್ನಲ್ಲೇ ಎಚ್ಚೆತ್ತ ವೈದ್ಯಾಧಿಕಾರಿಗಳು ವಿವಿಧ ಜಿಲ್ಲೆಗಳ ಆಸ್ಪತ್ರೆ, ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದಾರೆ.

ಉಡುಪಿ ಜಿಲ್ಲೆಯ ಹಲವೆಡೆ ಲ್ಯಾಬ್, ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ನಕಲಿ ವೈದ್ಯರು, ನಕಲಿ ಕ್ಲಿನಿಕ್ ಗಳು ಪತ್ತೆಯಾಗಿವೆ. ಉಡುಪಿ, ಕುಂದಾಪುರ ತಾಲೂಕಿನ 7 ಕಡೆ ದಾಳಿ ನಡೆಸಲಾಗಿದೆ.

ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್ ಗಳನ್ನು ಅಧಿಕರಿಗಳು ಸೀಜ್ ಮಾಡಿದ್ದಾರೆ. ಉಪ್ಪುಂದದ ಸುಷ್ಮಾ ಕ್ಲಿನಿಕ್ ಲ್ಯಾಬ್ ಸೀಜ್ ಮಾಡಲಾಗಿದೆ. ಇನ್ನು ಕುಂದಾಪುರದ ಬಯೋಲಿನ್ ಕ್ಲಿನಿಕ್ ಲ್ಯಾಬ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಆರೂರಿನಲ್ಲಿಯೂ ಒಂದು ಕ್ಲಿನಿಕ್ ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...