ಉಡುಪಿ: ಹೋಟೆಲ್ ಬಾಣಸಿಗರೊಬ್ಬರನ್ನು ಬಿಯರ್ ಬಾಟಲ್ ನಿಂದ ಕತ್ತು ಸೀಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದ ಅನಂತ ಕಲ್ಯಾಣನಗರದಲ್ಲಿ ನಡೆದಿದೆ.
ಶ್ರೀಧರ್ ನಾಯಕ್ ಕೊಲೆಯಾದ ವ್ಯಕ್ತಿ. ಬೀಯರ್ ಮಣಿಪಾಲದ ಹೋಟೆಲ್ ವೊಂದರಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಶ್ರೀದರ್, ಎಂದಿನಂತೆ ಬೆಳಿಗ್ಗೆ ಮನೆಯಿಂದ ಹೋಟೆಲ್ ಗೆ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಬಿಯರ್ ಬಾಟಲ್ ಗಾಜಿನಿಂದ ಶ್ರೀಧರ್ ಅವರ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ ಪಿ ಡಾ.ಕೆ.ಅರುಣ್ ಕುಮಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.