ಉಡುಪಿ: ಪ್ರೌಢಶಾಲೆಯ 35 ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಉಡುಪಿಯ ವಳಕಾಡು ವಾರ್ಡ್ ಶಾಲೆಯಲ್ಲಿ ನಡೆದಿದೆ.
ಸರ್ಕಾರಿ ಶಾಲೆಯ ತರಗತಿಯೊಳಗೆ ಹೆಜ್ಜೇನು ದಾಳಿ ನಡೆಸಿವೆ. ದಾಳಿಯಿಂದಾಗಿ ಗಾಯಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಎಸ್.ಡಿ.ಎಂ.ಸಿ. ಸದಸ್ಯ ಬಂದಿದ್ದರು. ಅವರ ಮೇಲೆಯೂ ಜೇನು ಹುಳಗಳು ದಾಳಿ ಮಾಡಿವೆ.
ತರಗತಿಯ ಪಕ್ಕದಲ್ಲಿ 5-6 ಹೆಜ್ಜೇನು ಗೂಡು ಕಟ್ಟಿವೆ. ಎಸ್.ಡಿ.ಎಂ.ಸಿ. ಸದಸ್ಯನಿಗೆ ಜಿಲ್ಲಾಸ್ಪತ್ರೆಯ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ.