
ಕೋಲಾರ: ಉಡುಪಿ ಗ್ಯಾಂಗ್ ವಾರ್ ಬೆನ್ನಲ್ಲೇ ಕೋಲಾರದಲ್ಲಿಯೂ ಯುವಕನೊಬ್ಬ ಮಾರಕಾಸ್ತ್ರಗಳನ್ನು ಹಿಡಿದು ಜನರಲ್ಲಿ ಭಯ ಹುಟ್ಟಿಸಿ ಪುಂಡಾಟ ಮೆರೆಯುತ್ತಿದ್ದವನನ್ನು ಮುಳಬಾಗಿಲು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪಿಚ್ಚಗುಂಟ್ಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. 27 ವರ್ಷದ ಸಂದೀಪ್ ಬಂಧಿತ ಆರೋಪಿ. ಬಂಧಿತನಿಂದ ತಲ್ವಾರ್ ವಶಕ್ಕೆ ಪಡೆಯಲಾಗಿದೆ.
ಸಾರ್ವಜನಿಕರಲ್ಲಿ ಭಯ ಹುಟ್ಟಿಸಲೆಂದೇ ಸಂದೀಪ್ ತಲ್ವಾರ್ ಹಿಡಿದು ಪೋಸ್ ನೀಡುತ್ತಿದ್ದ. ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ತಡರಾತ್ರಿ ಎರಡು ಕಾರುಗಳಲ್ಲಿ ಬಂದಿದ್ದ ಗುಂಪೊಂದು ನಡುರಸ್ತೆಯೇ ಗ್ಯಾಂಗ್ ವಾರ್ ನಡೆಸಿತ್ತು. ಪ್ರಕರಣ ಸಂಬಂಧ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.