alex Certify ಆ‌ಟೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ನೀಡಿದ ಉಬರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆ‌ಟೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ನೀಡಿದ ಉಬರ್

ಬೆಂಗಳೂರು: ಕರ್ನಾಟಕ ಸರ್ಕಾರವು ಶುಕ್ರವಾರ ರಾಜ್ಯದಲ್ಲಿ ಸರ್ಕಾರದ ನಿಗದಿತ ಮಿತಿ ಬೆಲೆಗೆ ಶೇಕಡಾ 10 ರಷ್ಟು ಹೆಚ್ಚುವರಿ ದರದೊಂದಿಗೆ ಆಟೋರಿಕ್ಷಾ ಸೇವೆಗಳನ್ನು ನಡೆಸಲು ಕ್ಯಾಬ್ ಅಗ್ರಿಗೇಟರ್‌ಗಳಿಗೆ ಅನುಮತಿ ನೀಡಿದ ಹೊರತಾಗಿಯೂ ಉಬರ್ ಕನಿಷ್ಠ ಆಟೋ ದರವನ್ನು 100 ರೂ.ನಿಂದ 30 ರೂ.ಗೆ ಇಳಿಸಿದೆ. ಓಲಾ ಮತ್ತು ಉಬರ್ ಕರ್ನಾಟಕ ಸರ್ಕಾರದ ಟ್ಯಾಕ್ಸಿ ಅಪ್ಲಿಕೇಶನ್‌ಗಳ ಮೇಲಿನ ಆಟೋ ರಿಕ್ಷಾ ಸೇವೆಯ ನಿಷೇಧವನ್ನು ಅಕ್ಟೋಬರ್ 6 ರಂದು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು

ಶನಿವಾರದ ನಂತರ, ಉಬರ್ ತನ್ನ ಆಟೋ ದರವನ್ನು 30 ರೂ. ನಿಗದಿಪಡಿಸಿವೆ, ಇದು ಹಿಂದಿನ ರೂ. 100 ರಿಂದ ತೀವ್ರ ಇಳಿಕೆಯಾಗಿದೆ. ಸರ್ಕಾರವು 10 ರಿಂದ 15 ದಿನಗಳಲ್ಲಿ ಆಟೋ ದರಗಳ ಹೊಸ ನಿಯಮವನ್ನು ತರಲಿದೆ ಮತ್ತು ಅಲ್ಲಿಯವರೆಗೆ, ಕ್ಯಾಬ್ ಅಗ್ರಿಗೇಟರ್‌ಗಳು ಸರ್ಕಾರವು ನಿಗದಿಪಡಿಸಿದ ಪ್ರಸ್ತುತ ಆಟೋ ದರಗಳಿಗಿಂತ 10% ಹೆಚ್ಚಳದೊಂದಿಗೆ ಆಟೋರಿಕ್ಷಾ ಸೇವೆಗಳನ್ನು ಚಲಾಯಿಸಬಹುದು ಎಂದು ಹೇಳಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ಆಟೋ ಚಾಲಕರ ಮೀಟರ್ ದರವನ್ನು ಹೆಚ್ಚಿಸಿತ್ತು. ಮೊದಲ ಎರಡು ಕಿಲೋಮೀಟರ್‌ಗೆ ₹25ರಿಂದ ₹30ಕ್ಕೆ ಹಾಗೂ ಪ್ರತಿ ಕಿಲೋಮೀಟರ್‌ಗೆ ಮೂಲ ಬೆಲೆ ₹13ರಿಂದ ₹15ಕ್ಕೆ ಏರಿಕೆಯಾಗಿತ್ತು.

ಅಕ್ಟೋಬರ್ 6 ರಂದು ಕರ್ನಾಟಕ ಸಾರಿಗೆ ಇಲಾಖೆಯು ಆದೇಶವೊಂದದನ್ನು ಹೊರಡಿಸಿ “ತಮ್ಮ ಅಪ್ಲಿಕೇಶನ್‌ಗಳ ಮೂಲಕ ಆಟೋ ಸೇವೆಗಳನ್ನು ನಡೆಸುತ್ತಿರುವ ಅಗ್ರಿಗೇಟರ್‌ಗಳು ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸರ್ಕಾರ ನಿಗದಿಪಡಿಸಿದ ಬೆಲೆ ಮಿತಿಯನ್ನು ಅನುಸರಿಸದಿರುವ ಬಗ್ಗೆ ನಮಗೆ ದೂರುಗಳು ಬಂದಿವೆ. ಹೆಚ್ಚಿನ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಆದ್ದರಿಂದ, ಆಟೋ ಸೇವೆಗಳನ್ನು ಸ್ಥಗಿತಗೊಳಿಸಬೇಕು ಮತ್ತು ಅಗ್ರಿಗೇಟರ್‌ಗಳು ಅಧಿಕ ಬೆಲೆಯ ಆರೋಪಗಳ ಕುರಿತು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು” ಎಂದು ಸೂಚನೆ ನೀಡಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...