alex Certify ಉಬರ್ ‘ಸೂಪರ್ ಆಪ್’ ನಲ್ಲಿ ವಿಮಾನ, ರೈಲು ಮತ್ತು ಬಸ್ ಬುಕಿಂಗ್‌ ಗೂ ಅವಕಾಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಬರ್ ‘ಸೂಪರ್ ಆಪ್’ ನಲ್ಲಿ ವಿಮಾನ, ರೈಲು ಮತ್ತು ಬಸ್ ಬುಕಿಂಗ್‌ ಗೂ ಅವಕಾಶ…!

ಉಬರ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನಗರ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಬುಕಿಂಗ್‌ನಿಂದ ಹಿಡಿದು ದೂರದ ಪ್ರಯಾಣಕ್ಕಾಗಿ ಟಿಕೆಟ್‌ ಕಾಯ್ದಿರಿಸುವ ಅವಕಾಶ ಒದಗಿಸುವವರೆಗೆ ಬುಕಿಂಗ್‌ಗಳ ಆಯ್ಕೆಗಳನ್ನು ಹೆಚ್ಚಿಸುವ ಸೂಪರ್ ಅಪ್ಲಿಕೇಶನ್ ಸಿದ್ಧಪಡಿಸುತ್ತಿದೆ.

ಉಬರ್ ಗ್ರಾಹಕರಿಗೆ ಹೊಸ ಆಯ್ಕೆಗಳಾಗಿ ರೈಲು, ಬಸ್‌ ಮತ್ತು ವಿಮಾನ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ಒದಗಿಬರಲಿದೆ. ಹೊಸ ಯೋಜನೆ ಯುಕೆನಲ್ಲಿ ಪ್ರಾಯೋಗಿಕ ಯೋಜನೆಯೊಂದಿಗೆ ಪ್ರಾರಂಭಿಸಲಾಗುವುದು.

ಆಯ್ಕೆಗಳನ್ನು ವಿಸ್ತರಿಸುವ ಯೋಜನೆ ಉಬರ್‌ಗೆ ಹೊಸದೇನಲ್ಲ. ಕಂಪನಿಯು 2018 ರಿಂದ ತಮ್ಮ ಆಯ್ಕೆಗಳನ್ನು ವಿಸ್ತರಿಸಲು ಬಯಸುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಈ ಯೋಜನೆಗಳಿಗೆ ಬ್ರೇಕ್‌ ಬಿದ್ದಿತ್ತು. ಈ ಹಿಂದೆ ಉಬರ್ ಕ್ಯಾಬ್‌ ಜೊತೆಗೆ ಆಹಾರ ಮತ್ತು ದಿನಸಿ ವಿತರಣೆ ಸೇವೆ ಆರಂಭಿಸಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...