ನವದೆಹಲಿ: ದೆಹಲಿ ನಿವಾಸಿಯೊಬ್ಬರು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಿತ್ತರಂಜನ್ ಪಾರ್ಕ್ (ಸಿಆರ್ ಪಾರ್ಕ್) ನಲ್ಲಿರುವ ತಮ್ಮ ನಿವಾಸಕ್ಕೆ ಉಬರ್ ಕ್ಯಾಬ್ ಬುಕ್ ಮಾಡಿದ್ದಾರೆ. ದೂರವು ಸುಮಾರು 21 ಕಿಲೋಮೀಟರ್ ಆಗಿತ್ತು. ಆದರೆ ಬಿಲ್ ಜನರೇಟ್ ಮಾಡಿದಾಗ, ಅದು 1,525 ರೂಗಳನ್ನು ತೋರಿಸಿದ್ದು, ಇದರಿಂದ ಅವರು ಶಾಕ್ಗೆ ಒಳಗಾಗಿದ್ದಾರೆ.
ಪ್ರಯಾಣವನ್ನು ಕೊನೆಗೊಳಿಸುವಾಗ ಮಹಿಳಾ ಪ್ರಯಾಣಿಕರು ಮೊತ್ತವನ್ನು ಪಾವತಿಸಬೇಕಾಗಿತ್ತು. ನಂತರ ಅವರು ದರವನ್ನು ಪರಿಶೀಲಿಸಲು ಕಂಪೆನಿಯನ್ನು ಸಂಪರ್ಕಿಸಿದರು. ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್‌ನಲ್ಲಿನ ದೋಷದಿಂದಾಗಿ ವಿಪರೀತ ಬಿಲ್ ಅನ್ನು ರಚಿಸಲಾಗಿದೆ ಎಂದು ಉಬರ್ ಪ್ರತಿನಿಧಿಗಳು ತಿಳಿಸಿದ್ದಾರೆ. ವಿಧಿಸಲಾದ ಹೆಚ್ಚುವರಿ ಶುಲ್ಕವನ್ನು ಮರುಪಾವತಿಸುವುದಾಗಿ ಹೇಳಿದ್ದಾರೆ.
ಆಕೆಯ ಕೋರಿಕೆಯ ಮೇರೆಗೆ ಕಂಪೆನಿಯು ಟಿಕೆಟ್ ವಿವರಗಳನ್ನು ಪರಿಶೀಲಿಸಿದಾಗ, ಅವರು ಉತ್ತರ ಪ್ರದೇಶ ಅಂತಾರಾಜ್ಯ ಗಡಿ ದಾಟಿರುವುದಾಗಿ ತೋರಿಸಿದೆ. ಆದರೆ ತಾವು ಗಡಿ ದಾಟಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ನಂತರ ಪರಿಶೀಲಿಸಿದಾಗ ಹೆಚ್ಚುವರಿ ಶುಲ್ಕ ವಿಧಿಸಿರುವುದು ಕಂಡುಬಂದಿದೆ.