ಅತ್ಯಂತ ದುಬಾರಿ ಕಾರುಗಳನ್ನು ತನಗೆ ಮಾರಾಟ ಮಾಡುವಂತೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಐಷಾರಾಮಿ ಶೋ ರೂಂವೊಂದರಲ್ಲಿ ಕಾರ್ ಡೀಲರ್‌ಗೆ ಸೊಕ್ಕಿನಿಂದ ಹೇಳುವ ವ್ಯಕ್ತಿಯನ್ನ ಬಂಧಿಸಲು ಆದೇಶಿಸಲಾಗಿದೆ. ಎಲ್ಲಾ ಐಷಾರಾಮಿ ಕಾರ್ ಗಳನ್ನ ತನಗೆ ಮಾರಾಟ ಮಾಡುವಂತೆ ಆದೇಶಿಸಿ ಅದನ್ನು ಚಿತ್ರೀಕರಿಸಿಕೊಂಡ ವ್ಯಕ್ತಿಯನ್ನು ಬಂಧಿಸಲು ಆದೇಶಿಸಲಾಗಿದೆ ಎಂದು ಅರೇಬಿಯನ್ ಬ್ಯುಸಿನೆಸ್ ವರದಿ ಮಾಡಿದೆ.
ರಾಜ್ಯ-ಚಾಲಿತ ಸುದ್ದಿ ಸಂಸ್ಥೆ WAM ನ ವರದಿಯ ಪ್ರಕಾರ ವೀಡಿಯೊ ಎಮಿರಾಟಿ ಸಮಾಜವನ್ನು ಅವಮಾನಿಸಿ ಅಪಹಾಸ್ಯ ಮಾಡುತ್ತದೆ ಮತ್ತು ಹಾನಿಕಾರಕ ಸಾರ್ವಜನಿಕ ಅಭಿಪ್ರಾಯವನ್ನು ಪ್ರಚೋದಿಸುತ್ತದೆ.
ವೈರಲ್ ವೀಡಿಯೊದಲ್ಲಿ ಎಮಿರಾಟಿ ಡ್ರೆಸ್‌ನಲ್ಲಿರುವ ಏಷ್ಯನ್ ವ್ಯಕ್ತಿಯೊಬ್ಬರು $ 545,000 ಮೌಲ್ಯದ ಕಾರನ್ನು ಮತ್ತು ಇತರ ಕಾರ್ ಗಳನ್ನು ಖರೀದಿಸಲು ಪ್ರಯತ್ನಿಸುತ್ತಿರುವಾಗ ದೊಡ್ಡ ಮೊತ್ತದ ಹಣವನ್ನು ಸಾಗಿಸಲಾಗುತ್ತಿರುತ್ತದೆ.
“ಇಲ್ಲಿ ಅತ್ಯಂತ ದುಬಾರಿ ಕಾರು ಯಾವುದು? ಸರಿ. ನನಗೆ ಮರ್ಸಿಡೆಜ್, ರೋಲ್ಸ್ ರಾಯ್ಸ್ ಮತ್ತು ರೆಡ್ ಬುಲ್ ಸ್ಪೋರ್ಟ್ಸ್ ಕಾರ್ ಬೇಕು” ಎಂದು ಕೇಳುತ್ತಿದ್ದು ಅದನ್ನ ಚಿತ್ರೀಕರಿಸಿಕೊಳ್ಳಲಾಗಿದೆ.
ಯುಎಇ ಅಟಾರ್ನಿ ಜನರಲ್ ಕಚೇರಿಯಲ್ಲಿನ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕೂಡ ಸಾಮಾಜಿಕ ಮಾಧ್ಯಮದ ವೀಡಿಯೊ ಕ್ಲಿಪ್ ಅನ್ನು ಮೇಲ್ವಿಚಾರಣೆ ಮಾಡಿದೆ. ಇದರಲ್ಲಿ ಆರೋಪಿಯು ಐಷಾರಾಮಿ ಕಾರ್ ಶೋರೂಮ್‌ನಲ್ಲಿ ಎಮಿರಾಟಿ ಉಡುಗೆಯನ್ನು ಧರಿಸಿರುವುದನ್ನು ಮತ್ತು ಇಬ್ಬರು ವ್ಯಕ್ತಿಗಳು ದೊಡ್ಡ ಮೊತ್ತದ ಹಣವನ್ನು ಸಾಗಿಸುತ್ತಿರುವುದನ್ನು ಗಮನಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಷನ್ ವೀಡಿಯೊ ಕ್ಲಿಪ್ ಅನ್ನು ಚಿತ್ರೀಕರಿಸಿದ ಕಾರ್ ಶೋ ರೂಂನ ಮಾಲೀಕರಿಗೆ ಸಮನ್ಸ್ ನೀಡುವಂತೆ ಆದೇಶಿಸಿದೆ.
https://youtu.be/H5FRAy-imb8