alex Certify ಸೆಮಿಫೈನಲ್ ಕನಸು ನನಸು ಮಾಡಿಕೊಂಡ ಭಾರತ; ಅಪ್ಘಾನ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕಿರಿಯರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಮಿಫೈನಲ್ ಕನಸು ನನಸು ಮಾಡಿಕೊಂಡ ಭಾರತ; ಅಪ್ಘಾನ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಕಿರಿಯರು…..!

ಏಷ್ಯಾಕಪ್ 19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶ ಮಾಡಿದೆ.
ಎ ಗುಂಪಿನ ಮೂರನೇ ಪಂದ್ಯದಲ್ಲಿ ಭಾರತೀಯ ಕಿರಿಯರ ತಂಡ ಅಪ್ಘಾನಿಸ್ತಾನವನ್ನು ಸೋಲಿಸಿ ಸೆಮಿಫೈನಲ್ ಕನಸು ನನಸು ಮಾಡಿಕೊಂಡಿದೆ.

ಅಪ್ಘಾನಿಸ್ತಾನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್ ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಅಪ್ಘಾನಿಸ್ತಾನ್ ತಂಡವು ನಿಗದಿತ ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ ತಂಡವು ಇನ್ನೂ ನಾಲ್ಕು ಬೌಲ್ ಗಳು ಉಳಿದಿರುವಂತೆ ನಾಲ್ಕು ವಿಕೆಟ್ ಗಳ ಜಯ ಸಾಧಿಸಿತು.

BIG NEWS: ಒಮಿಕ್ರಾನ್ ಆತಂಕ, ಮುಂದಿನ ವರ್ಷ ಜ. 31 ರವರೆಗೆ ಅಂತರಾಷ್ಟ್ರೀಯ ವಿಮಾನ ಸ್ಥಗಿತ

ಭಾರತದ ಪರ ಆರಂಭಿಕ ಆಟಗಾರ ಹರ್ನೂರ್ ಸಿಂಗ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಟೂರ್ನಿಯಲ್ಲಿ ಭಾರತ ತಂಡ ಯುಎಇ ವಿರುದ್ಧ ಗೆದ್ದು, ಪಾಕ್ ವಿರುದ್ಧ ವಿರೋಚಿತ ಸೋಲು ಕಂಡಿತ್ತು.

ಅಪ್ಘಾನಿಸ್ತಾನ್ದ ಇಜಾಜ್ ಮತ್ತು ಖೈಬರ್ ಕೊನೆಯ ಓವರ್ ನಲ್ಲಿ ಬರೋಬ್ಬರಿ 27 ರನ್ ಗಳಿಸಿದ್ದರು. 3 ಸಿಕ್ಸರ್ ಹಾಗೂ ಒಂದು ಬೌಂಡರಿ ದಾಖಲಿಸಿದ್ದರು. ಭಾರತದ ಪರ ವಿಕ್ಕಿ ಓಸ್ತ್ವಾಲ್ ಹಾಗೂ ಕೌಶಲ್ ತಾಂಬೆ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಹರ್ನೂರ್ 65 ರನ್ ಗಳಿಸಿ ಮಿಂಚಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...