ತಮ್ಮ ಕುಟುಂಬದ ಹತ್ತು ಮಂದಿಯನ್ನು ಕೋವಿಡ್ ಸೋಂಕಿನಿಂದಾಗಿ ಕಳೆದುಕೊಂಡಿದ್ದಾಗಿ ಅಮೆರಿಕದ ಸರ್ಜನ್ ಜನರಲ್ ಆಗಿರುವ ಭಾರತೀಯ ಮೂಲದ ಡಾ. ವಿವೇಕ್ ಮೂರ್ತಿ ತಿಳಿಸಿದ್ದಾರೆ.
“ಕೋವಿಡ್-19ನಿಂದ ಅನುಭವಿಸುತ್ತಿರುವ ಪ್ರತಿ ಸಾವನ್ನು ತಡೆಗಟ್ಟಬಹುದಿತ್ತು ಎಂದು ಹೇಳಲು ನನಗೆ ಬಹಳ ನೋವಾಗುತ್ತದೆ. ಅಮೆರಿಕ ಹಾಗೂ ಭಾರತದಲ್ಲಿರುವ ತಮ್ಮ ಸಂಬಂಧಿಗಳ ಪೈಕಿ 10 ಮಂದಿಯನ್ನು ಕಳೆದುಕೊಂಡ ವ್ಯಕ್ತಿಯಾಗಿ ನಾನು ಹೇಳುತ್ತಿದ್ದು, ಮೃತಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿನಿತ್ಯವೂ ಲಸಿಕೆ ಪಡೆಯುವ ಸಾಧ್ಯತೆ ಇರಬೇಕಿತ್ತು ಎನಿಸುತ್ತದೆ” ಎಂದು ವಿವೇಕ್ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್
ಶ್ವೇತಭವನದ ಈ ಪ್ರತಿಷ್ಠಿತ ಹುದ್ದೆಗೆ ಎರಡನೇ ಬಾರಿಗೆ ಅರ್ಹರಾಗಿರುವ ವಿವೇಕ್, ಕೋವಿಡ್ನಿಂದ ಖುದ್ದು ತಮ್ಮ ಕುಟುಂಬ ಏನೆಲ್ಲಾ ಅನುಭವಿಸಿದೆ ಎಂದು ಹೇಳುತ್ತಾ, “ಲಸಿಕೆ ಪಡೆಯಲು ಇನ್ನೂ ಅರ್ಹರಾಗಬೇಕಿರುವ ಇಬ್ಬರು ಪುಟ್ಟ ಮಕ್ಕಳ ತಂದೆಯಾಗಿ ನಾನು ಹೇಳುತ್ತಿರುವೆ, ನನ್ನ ಮಕ್ಕಳೆಲ್ಲಾ ತಮ್ಮನ್ನು ವೈರಸ್ನಿಂದ ರಕ್ಷಿಸಿಕೊಳ್ಳಲು ನಾವೆಲ್ಲಾ ದೊಡ್ಡವರು ಲಸಿಕೆ ಪಡೆಯಬೇಕೆಂದು ಎದುರು ನೋಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.