ಈಗಿನ ಬೆಳೆದ ಟೆಕ್ನಾಲಜಿ ಯುಗದಲ್ಲಿ ಬೇಹುಗಾರಿಕೆಗೆ ಮುಂದುವರಿದ ದೇಶಗಳ ಮೊದಲ ಆಯ್ಕೆ ಉಪಗ್ರಹಗಳು. ತನ್ನ ಏನೇ ಕೆಲಸಕ್ಕೂ ಇತ್ತೀಚಿನ ದಿನಗಳಲ್ಲಿ ಉಪಗ್ರಹಳನ್ನು ಬಳಸಲಾಗ್ತಿದೆ. ಹೀಗಾಗಿ ಅನೇಕ ಬೇಹುಗಾರಿಕಾ ಬಲೂನುಗಳನ್ನು ಬಳಸಿಕೊಳ್ಳುತ್ತವೆ. ಇದೀಗ ಇಂಥಹದ್ದೇ ಬಲೂನ್ ಗಳನ್ನು
ಕ್ಷಿಪಣಿಯಿಂದ ಹೊಡೆದುರುಳಿಸಿದೆ ಅಮೆರಿಕ.
ಇಂತಹದೊಂದು ಕೆಲಸ ಮಾಡಿದ್ದು ಚೀನಾ ಎಂದು ಹೇಳಲಾಗ್ತಿದೆ. ಸ್ಪೈ ಬಲೂನ್ಗಳನ್ನು ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಬಲೂನ್ ಬಿಟ್ಟಿದೆ ಎಂದು ಹೇಳಲಾಗ್ತಿದೆ. ಕೆಲವು ದಿನಗಳ ಹಿಂದೆ ಚೀನಾದ ಬಲೂನ್ಗಳನ್ನು ಯುಎಸ್ ಮಿಲಿಟರಿ ಹೊಡೆದುರುಳಿಸಿತು ಎಂದು ಮಾಧ್ಯಮ ವರದಿಯಾಗಿದೆ.
ಜಪಾನ್, ಭಾರತ, ವಿಯೆಟ್ನಾಂ, ತೈವಾನ್ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವಾರು ದೇಶಗಳಲ್ಲಿನ ಮಿಲಿಟರಿ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸಲಾಗಿತ್ತಂತೆ. ಇಂತಹ ಬಲೂನ್ ಗಳನ್ನು ಒಟ್ಟು ಐದು ಕಡೆಗಳಲ್ಲಿ ನಾಶಮಾಡಲಾಗಿದೆ.
ಅಮೆರಿಕಾದ ಕೆಲವು ಭಾಗದ ಸೂಕ್ಷ್ಮ ಪ್ರದೇಶಗಳಲ್ಲಿ ಈ ಬಲೂನ್ ತೂಗಾಡುತ್ತಿತ್ತು. ಸುಮಾರು 120 ಅಡಿ ಅಗಲ, 130 ಅಡಿ ಉದ್ದ ಇತ್ತು ಈ ಬಲೂನ್ ಎನ್ನಲಾಗಿದೆ. ಇನ್ನು ಬಲೂನ್ ನಾಶಪಡಿಸಿದ ಮಿಲಿಟರಿಗೆ ಅಮೆರಿಕಾ ಅಧ್ಯಕ್ಷರು ಅಭಿನಂದನೆ ತಿಳಿದಿದ್ದಾರೆ. ಎಲ್ಲಾ ದೇಶಗಳ ಮೇಲೆ ಚೀನಾ ಬೇಹುಗಾರಿಕೆ ಮಾಡ್ತಾ ಇದ್ಯಾ ಅನ್ನೊ ಅನುಮಾನ ಶುರುವಾಗಿದೆ.