
ನವದೆಹಲಿ: 2024 ರ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ನಲ್ಲಿ ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಒಂದು ವಿಕೆಟ್ ನಿಂದ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 179 ರನ್ಗಳ ಟಾರ್ಗೆಟ್ ನೀಡಿತು. ಆದರೆ ಮತ್ತೊಂದೆಡೆ, ಉತ್ತಮ ಗುರಿಯನ್ನು ಬೆನ್ನಟ್ಟುವಾಗ ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್ಅಪ್ ಬ್ಯಾಟಿಂಗ್ ಕುಸಿತವನ್ನು ಅನುಭವಿಸಿತು ಮತ್ತು 164/9 ಕ್ಕೆ ಕುಸಿಯಿತು.ಆದರೆ ಕೊನೆಯ ವಿಕೆಟ್ಗೆ ರಾಫೆಲ್ ಮ್ಯಾಕ್ಮಿಲನ್ ಮತ್ತು ಕಾಲಮ್ ವಿಲ್ಡರ್ ನಡುವಿನ ಜೊತೆಯಾಟವು ತಂಡವನ್ನು ಗೆಲುವಿನ ದಡ ಸೇರಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಪಾಕಿಸ್ತಾನದ ಎಲ್ಲಾ ಆಟಗಾರರು ಕಣ್ಣೀರಿಟ್ಟಿದ್ದಾರೆ. ಪಾಕಿಸ್ತಾನ ಪುರುಷರ ತಂಡದ ನಿರ್ದೇಶಕರಾಗಿರುವ ಮೊಹಮ್ಮದ್ ಹಫೀಜ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸೆಮಿಫೈನಲ್ ಸೋಲಿನ ನಂತರ ಯುವ ತಂಡವನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿದರು.