alex Certify ತ್ಯಾವರೆಕೊಪ್ಪದ ಹಿರಿಯ ಸಿಂಹ ‘ಆರ್ಯ’ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ಯಾವರೆಕೊಪ್ಪದ ಹಿರಿಯ ಸಿಂಹ ‘ಆರ್ಯ’ ಸಾವು

ಶಿವಮೊಗ್ಗ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಮೊಗ್ಗ ತ್ಯಾವರೆಕೊಪ್ಪ ಹುಲಿ -ಸಿಂಹಧಾಮದ ಹಿರಿಯ ಗಂಡು ಸಿಂಹ ಆರ್ಯ(18) ಸೋಮವಾರ ಮೃತಪಟ್ಟಿದೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರ್ಯ ಸಿಂಹ ತೀವ್ರ ಅಸ್ವಸ್ಥಗೊಂಡಿದ್ದು, ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ. 18 ವರ್ಷ ಒಂದು ತಿಂಗಳ ಆರ್ಯ ಹುಲಿ ಸಿಂಹಧಾಮದಲ್ಲಿರುವ ಸಿಂಹಗಳಲ್ಲಿ ಹಿರಿಯನಾಗಿದ್ದ. ಇತ್ತೀಚೆಗೆ ನಿರೀಕ್ಷಿತ ಮಟ್ಟದಲ್ಲಿ ಚಿಕಿತ್ಸೆಗೆ ಸ್ಪಂದಿಸದ ಆರ್ಯ ಆಹಾರ ಸೇವಿಸುವುದನ್ನು ನಿಲ್ಲಿಸಿದ್ದು, ಸೋಮವಾರ ಮೃತಪಟ್ಟಿದೆ. ಸಿಂಹಧಾಮದಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...