alex Certify ದೈತ್ಯ ಹಾವಿನೊಂದಿಗೆ ಆಟವಾಡಿದ ಪುಟ್ಟ ಬಾಲಕ…..! ವಿಡಿಯೋ ನೋಡಿ ಬೆಚ್ಚಿಬಿದ್ದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈತ್ಯ ಹಾವಿನೊಂದಿಗೆ ಆಟವಾಡಿದ ಪುಟ್ಟ ಬಾಲಕ…..! ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

ಸಾಮಾನ್ಯವಾಗಿ ಅನೇಕರಿಗೆ ಹಾವು ಅಂದ್ರೆ ಭಯ ಇದ್ದೇ ಇರುತ್ತದೆ. ಎಲ್ಲಾದ್ರೂ ದೈತ್ಯ ಹಾವು ಕಂಡ್ರೆ ಓಡಿ ಹೋಗೋದು ಗ್ಯಾರಂಟಿ.. ಆದರೆ ಇಲ್ಲೊಂದು ಪುಟ್ಟ ಮಗು ಹಾವಿನ ಜೊತೆ ಆಟಿಕೆಯಂತೆ ಆಡಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಆಸ್ಟ್ರೇಲಿಯಾದ ಮೊಸಳೆ ತಜ್ಞ ಮ್ಯಾಟ್ ರೈಟ್ ಎಂಬುವವರ 2 ವರ್ಷದ ಮಗ ಲಿಟ್ಟೆ ಬಂಜೊ ಆಟಿಕೆಯಂತೆ ದೈತ್ಯ ಹಾವನ್ನು ಎಳೆಯುತ್ತಾನೆ.

ಹುಲ್ಲುಹಾಸಿನ ಪ್ರದೇಶದಲ್ಲಿ ದೈತ್ಯಾಕಾರದ ಹಾವನ್ನು ಹೊರಗೆ ತಂದಾಗ ಆ ಮಗು ಯಾವುದೇ ಭಯವಿಲ್ಲದೆ ಹೆಬ್ಬಾವಿನ ಬಾಲ ಹಿಡಿದು ಎಳೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇಂದು ‘ರತ್ನನ್ ಪ್ರಪಂಚ’ ಚಿತ್ರದ ‘ಅಲೆಮಾರಿಯೇ’ ಹಾಡು ರಿಲೀಸ್

ರೈಟ್ ತನ್ನ ಮಗನಿಗೆ ಹಾವು ಹಿಡಿಯುವ ಕಲೆ ಕಲಿಸಿದ್ದಾನೆ. ಇದೀಗ ಈ ಪುಟ್ಟ ಮಗು ಆಟಿಕೆಯಂತೆ ಹೆಬ್ಬಾವಿನ ಜೊತೆ ಆಡುತ್ತಾನೆ. ಈ ವಿಸ್ಮಯಕಾರಿ ವಿಡಿಯೋವನ್ನು ರೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ 3.7 ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಇದನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿಯೂ ಹಂಚಿಕೊಳ್ಳಲಾಗಿದೆ.

https://youtu.be/PMipYBsF0Z0

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...