
ನೋಯ್ಡಾ: ಮದುವೆ ಮೆರವಣಿಗೆಯ ವೇಳೆ ಹಾರಿಸಿದ ಗುಂಡು ತಗುಲಿ ಎರಡೂವರೆ ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಸೋಮವಾರ ಪೊಲೀಸರು ನೀಡಿರುವ ಪ್ರಕಾರ, ಮೆರವಣಿಗೆಯ ವೇಳೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಗುಂಡು ಮಗುವಿಗೆ ತಗುಲಿ ಮಗು ಸಾವನ್ನಪ್ಪಿದೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಅಘಪುರ ಗ್ರಾಮದಲ್ಲಿ ಬಲ್ವೀರ್ ಸಿಂಗ್ ಅವರ ನಿವಾಸದಲ್ಲಿ ಮದುವೆ ಮೆರವಣಿಗೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ವಿಕಾಸ್ ಶರ್ಮಾ ಮತ್ತು ಅವರ ಕುಟುಂಬದವರು ತಮ್ಮ ಬಾಲ್ಕನಿಯಿಂದ ಮದುವೆ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದಾಗ ಗುಂಡು ಅವರ ಮಗುವಿಗೆ ತಗುಲಿದೆ. ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಚಿಕಿತ್ಸೆಯ ಸಮಯದಲ್ಲಿ ಅವನು ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ.
ಮೆರವಣಿಗೆಯ ಸಂದರ್ಭದಲ್ಲಿ ವರನ ಹಳ್ಳಿಯವನೆಂದು ಹೇಳಿಕೊಂಡು ಹ್ಯಾಪಿ ಎಂಬ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಬಂಧಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ(ಡಿಸಿಪಿ) ರಾಮ್ ಬದನ್ ಸಿಂಗ್ ತಿಳಿಸಿದ್ದಾರೆ.