
ತಮಿಳುನಾಡಿನ ಮಣಿಮಂಗಲಂನಲ್ಲಿ ಒಂದು ಘೋರ ದುರಂತ ಸಂಭವಿಸಿದೆ. ಅಪಾರ್ಟ್ಮೆಂಟ್ನಿಂದ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ.
ಭಾನುವಾರ ಮಣಿಮಂಗಲಂನ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ಬಾಲಚಂದ್ರನ್ ಮತ್ತು ವಿದ್ಯಾ ದಂಪತಿಗಳ ಮಗಳು ಅರುದ್ರಾ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ. ಬಾಲಚಂದ್ರನ್ ತೆಲಂಗಾಣದಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೊಮ್ಮೆ ಮನೆಗೆ ಬರುತ್ತಾರೆ.
ವಿದ್ಯಾ ತಮ್ಮ ಇಬ್ಬರು ಮಕ್ಕಳೊಂದಿಗೆ ಟೆರೇಸ್ನಿಂದ ಬಟ್ಟೆ ತೆಗೆದುಕೊಂಡು ಕೆಳಗೆ ಬರುತ್ತಿದ್ದರು. ಅರುದ್ರಾ ತನ್ನ ತಾಯಿಯ ಮುಂದೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ನಾಲ್ಕನೇ ಮಹಡಿಯಿಂದ ಬಿದ್ದಿದ್ದಾಳೆ. ತಲೆಗೆ ತೀವ್ರ ಗಾಯಗಳಾಗಿದ್ದರಿಂದ ಅರುದ್ರಾ ಸಾವನ್ನಪ್ಪಿದ್ದಾಳೆ. ಮಗುವನ್ನು ಉಳಿಸಲು ವಿದ್ಯಾ ಕೂಡ ಓಡಿಬರುವಾಗ ಜಾರಿ ಬಿದ್ದು ಕಾಲಿಗೆ ಪೆಟ್ಟಾಗಿದೆ.
ಅರುದ್ರಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ. ವಿದ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ಬಗ್ಗೆ ಮಣಿಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.