ಬೆಂಗಳೂರು: ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಡಾಬಸ್ ಪೇಟೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಎಸ್.ಕೆ. ಸ್ಟೀಲ್ ಕಂಪನಿಯಲ್ಲಿ ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಬಿಹಾರ ಮೂಲದ ಅಶೋಕ ಕುಮಾರ್(49), ಒಡಿಶಾ ಮೂಲದ ಮುಕೇಶ್ ಕುಮಾರ್(33) ಮೃತಪಟ್ಟಿದ್ದಾರೆ. ದುರಂತದಲ್ಲಿ ಸುಶೀಲ್ ಕುಮಾರ್ ಎಂಬುವರು ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.