ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ ಸೈಕಲ್, ಆಗಸ್ಟ್ 2021ರ ವೇಳೆಗೆ ವಾಹನ ಮಾರಾಟದಲ್ಲಿ ಶೇಕಡಾ 18ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ 4 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, 29,214 ರಫ್ತು ಯುನಿಟ್ ಗಳನ್ನು ಹೊಂದಿದೆ.
ಹೋಂಡಾ ಕಂಪನಿಯು 2021ರ ಆಗಸ್ಟ್ ನಲ್ಲಿ 4.3 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿವೆ. ಇದು ಆರ್ಥಿಕ ಚಟುವಟಿಕೆಯಲ್ಲಿ ಸ್ಥಿರವಾದ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ. ಹೋಂಡಾ ದ್ವಿಚಕ್ರ ವಾಹನಗಳ ಒಟ್ಟು ಮಾರಾಟವು ಆಗಸ್ಟ್ 2021ರಲ್ಲಿ 4,30,683 ಯುನಿಟ್ ಗಳಷ್ಟಿದ್ದು, ಇವುಗಳಲ್ಲಿ ದೇಶೀಯ ದ್ವಿಚಕ್ರ ವಾಹನಗಳ ಮಾರಾಟವು 4,01,469 ವಾಹನಗಳನ್ನು ಹೊಂದಿದೆ. ಅದೇ ತಿಂಗಳಲ್ಲಿ ಎಚ್ಎಂಎಸ್ಐನ ದ್ವಿಚಕ್ರ ವಾಹನ ರಫ್ತು 29,214 ಯುನಿಟ್ ಗಳಲ್ಲಿ ವರದಿಯಾಗಿದೆ.
EFPO ಚಂದಾದಾರರಿಗೆ ಮಹತ್ವದ ಮಾಹಿತಿ: ನಿರ್ವಹಿಸಬೇಕಿದೆ 2 ಪಿಎಫ್ ಖಾತೆ -2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಗೆ ಬಡ್ಡಿ ಬರೆ
ಹೋಂಡಾದ ದೇಶೀಯ ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 18 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. “ಆಗಸ್ಟ್ ತಿಂಗಳು ದೇಶದಲ್ಲಿ ಹಬ್ಬದ ವಾತಾವರಣ ನಿರ್ಮಿಸುತ್ತವೆ. ವಿಚಾರಣೆಗಳು ಹಾಗೂ ಗ್ರಾಹಕರ ಪ್ರತಿಕ್ರಿಯೆ ವಿಷಯದಲ್ಲಿ ಸ್ಥಿರವಾದ ತಿಂಗಳ ಚೇತರಿಕೆಯೊಂದಿಗೆ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತೇವೆ. ನಾವು ಇತ್ತೀಚೆಗೆ ಅನಾವರಣಗೊಳಿಸಿದ ಮೋಟಾರ್ ಸೈಕಲ್ ಹೋಂಡಾ ಸಿಬಿ200ಎಕ್ಸ್ ನ್ನು ಸೆಪ್ಟೆಂಬರ್ ನಲ್ಲಿ ವಿತರಣೆ ಮಾಡಲಿದ್ದೇವೆ” ಎಂದು ಮಾರುಕಟ್ಟೆ ಸನ್ನಿವೇಶ ಹಾಗೂ ಮಾರಾಟ ಪ್ರವೃತ್ತಿಯನ್ನು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ. ಲಿಮಿಟೆಡ್ ನ ನಿರ್ದೇಶಕರಾದ ಯದವಿಂದರ್ ಸಿಂಗ್ ಗುಲೇರಿಯಾ ವಿವರಿಸಿದ್ದಾರೆ. ಇನ್ನು ಹೋಂಡಾ ಇತ್ತೀಚೆಗೆ ಅನಾವರಣಗೊಳಿಸಿದ ಸಿಬಿ200ಎಕ್ಸ್ ದ್ವಿಚಕ್ರ ವಾಹನಕ್ಕೆ 1.45 ಲಕ್ಷ ರೂ. ದರ ನಿಗದಿಪಡಿಸಲಾಗಿದೆ.