ಮಂಗಳೂರು: ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಇಬ್ಬರು ಖದೀಮರು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಮತ್ತೆ ಸರಗಳ್ಳತನ ಮಾಡಿ ಬಂಧಿತರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ತೊಕ್ಕಟ್ಟುವಿನ ಹಬೀಬ್ ಹಸನ್ ಯಾನೆ ಅಬ್ಬಿ (43) ಬಂಟ್ವಾಳ ಮೂಲದ ಮೂಡದ ಉಮ್ಮರ್ ಶಿಯಾಫ್ (29) ಬಂಧಿತ ಆರೋಪಿ.
ಇಬ್ಬರೂ ಆರೋಪಿಗಳು ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಇಬ್ಬರೂ ಬಿಡುಗಡೆಯಾದ ದಿನವೇ ಮತ್ತೆ ಕಳ್ಳತನಕ್ಕಿಳಿದಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಠಾಣೆವ್ಯಾಪ್ತಿಯಲ್ಲಿ ಬೈಕ್ ನಲ್ಲಿ ಆಗಮಿಸಿ ಮಹಿಳೆಯೊಬ್ಬರ ಚಿನ್ನದ ಸರ ಕಳುವು ಮಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ಕಳುವು ಮಾಡಿದ್ದ ಚಿನ್ನದ ಸರ ಹಾಗೂ ಬೈಕ್ ವಶಕ್ಕೆ ಪಡೆದಿದ್ದಾರೆ.