
ರೋಹ್ತಕ್: ಹರಿಯಾಣದ ಸೋನಿಪತ್ ನ ಅಶೋಕ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಮುಂಜಾನೆ ಇಬ್ಬರು ಪದವಿಪೂರ್ವ ವಿದ್ಯಾರ್ಥಿಗಳು ಮೃತಪಟ್ಟಿರುವುದು ಪತ್ತೆಯಾಗಿದೆ.
ತೆಲಂಗಾಣದ 20 ವರ್ಷದ ಪದವಿಪೂರ್ವ ವಿದ್ಯಾರ್ಥಿ ಮತ್ತು ಬೆಂಗಳೂರಿನ 19 ವರ್ಷದ ಮತ್ತೊಬ್ಬ ಪದವಿಪೂರ್ವ ವಿದ್ಯಾರ್ಥಿಯ ಶವಗಳು ಕ್ರಮವಾಗಿ ಹಾಸ್ಟೆಲ್ ಮತ್ತು ಸಂಸ್ಥೆಯ ಮುಖ್ಯ ದ್ವಾರದ ಬಳಿ ಪತ್ತೆಯಾಗಿವೆ. ಸಾವಿಗೆ ಕಾರಣಗಳು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಕುಟುಂಬಗಳಿಗೆ ಮಾಹಿತಿ ನೀಡಿದೆ. ಮೃತದೇಹಗಳನ್ನು ನಾಗರಿಕ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ಕುಟುಂಬದವರು ಬಂದ ನಂತರ ಶವಪರೀಕ್ಷೆ ನಡೆಸಲಾಗುವುದು.