ಸಿಡ್ನಿ: ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಪ್ಪತ್ತರ ಹರೆಯದ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸೋಮವಾರದ ಊಟದ ಸಮಯದ ನಂತರ, ನಾಪತ್ತೆಯಾದ ವ್ಯಕ್ತಿಗಳ ತನಿಖೆಯ ಮೇಲೆ ಪೋಲೀಸರು ಸಣ್ಣ ಪಟ್ಟಣವಾದ ವೈಯಾಂಬಿಲ್ಲದಲ್ಲಿ ಬಂಗಲೆ ಸ್ಥಳಕ್ಕೆ ಹೋಗಿದ್ದರು.
ಅವರು ಬಂಗಲೆ ಪ್ರವೇಶಿಸಿದ ತಕ್ಷಣ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಕ್ವೀನ್ಸ್ ಲ್ಯಾಂಡ್ ಪೊಲೀಸ್ ಯೂನಿಯನ್ ಅಧ್ಯಕ್ಷ ಇಯಾನ್ ಲೀವರ್ಸ್ ಹೇಳಿದರು.
ಮೃತರನ್ನು 26 ವರ್ಷದ ರಾಚೆಲ್ ಮೆಕ್ರೋ ಮತ್ತು 29 ವರ್ಷದ ಮ್ಯಾಥ್ಯೂ ಅರ್ನಾಲ್ಡ್ ಎಂದು ಗುರುತಿಸಲಾಗಿದೆ. ಇಬ್ಬರೂ ಕಾನ್ಸ್ ಟೇಬಲ್ಗಳಾಗಿದ್ದಾರೆ. ಪೊಲೀಸ್ ವಿಶೇಷ ತಂಡವು ಘಟನಾ ಸ್ಥಳಕ್ಕೆ ಧಾವಿಸಿದಾಗ ಿಬ್ಬರು ಪೊಲೀಸರು ಸೇರಿ 6 ಜನರ ಶವ ಪತ್ತೆಯಾಗಿವೆ. ತನಿಖೆ ಕೈಗೊಳ್ಳಲಾಗಿದೆ.