alex Certify ಕೆ-ಪಾಪ್ ಬ್ಯಾಂಡ್ ತಂಡ ನೋಡಲು ಮನೆ ಬಿಟ್ಟ ಪಾಕ್ ಬಾಲಕಿಯರು; 1200 ಕಿಮೀ ದೂರದಲ್ಲಿ ಕೊನೆಗೂ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆ-ಪಾಪ್ ಬ್ಯಾಂಡ್ ತಂಡ ನೋಡಲು ಮನೆ ಬಿಟ್ಟ ಪಾಕ್ ಬಾಲಕಿಯರು; 1200 ಕಿಮೀ ದೂರದಲ್ಲಿ ಕೊನೆಗೂ ಪತ್ತೆ

ಕೆ-ಪಾಪ್ ಬ್ಯಾಂಡ್​ನ ಬಿಟಿಎಸ್​ ತಂಡದ ಏಳು ಸದಸ್ಯರ (ಬ್ಯಾಂಡ್- ಜಿನ್, ಸುಗಾ, ಜೆ-ಹೋಪ್, ಆರ್‌ಎಂ, ಜಿಮಿನ್, ವಿ ಮತ್ತು ಜಂಗ್‌ಕೂಕ್) ತಂಡವು ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದೆ. ಪಾಕಿಸ್ತಾನದ ಇಬ್ಬರು ಹದಿಹರೆಯದ ಹುಡುಗಿಯರು BTS ಅನ್ನು ಭೇಟಿ ಮಾಡಲು ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸಿರುವ ಘಟನೆ ನಡೆದಿದೆ!

13 ಮತ್ತು 14 ವರ್ಷ ವಯಸ್ಸಿನ ಮಕ್ಕಳು ಇವರನ್ನು ಭೇಟಿಯಾಗಲು ಮನೆಯಿಂದ ಓಡಿಹೋಗಿ ಇದೀಗ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರೂ ತಮ್ಮ ಸ್ನೇಹಿತರ ಜೊತೆಗೂಡಿ ದಕ್ಷಿಣ ಕೊರಿಯಾಕ್ಕೆ ಹೋಗಲು ಯೋಜನೆ ರೂಪಿಸಿ ಲಾಹೋರ್​ವರೆಗೆ ಹೋಗಿದ್ದರು.

ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಲೇ ರೈಲು ನಿಲ್ದಾಣದ ಸಿಸಿಟಿವಿ ನೋಡಿದಾಗ ಇವರು ಅಲ್ಲಿ ಇರುವುದು ತಿಳಿದುಬಂದಿದೆ. ಅಷ್ಟೊತ್ತಿಗಾಗಿಯೇ ಬಾಲಕಿಯರು ತಮ್ಮ ಮನೆಯಿಂದ 1200 ಕಿಮೀ ದೂರದಲ್ಲಿರುವ ಲಾಹೋರ್‌ಗೆ ಹೋಗಿ ತಲುಪಿದ್ದರು. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎರಡು ನಗರಗಳ ಪೊಲೀಸ್ ತಂಡಗಳ ಸಮನ್ವಯದಲ್ಲಿ ಹುಡುಗಿಯರು ತಮ್ಮ ಮನೆಗೆ ಮರಳುವ ವ್ಯವಸ್ಥೆಯನ್ನು ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...