ಮೈಸೂರು: ಬಿರುಗಾಳಿ ಸಹಿತ ಭಾರಿ ಮಳೆಗೆ ಮನೆಯ ಗೋಡೆಗಳು ಕುಸಿದು ಬಿದ್ದಿದ್ದು, ಅವಾಂತರಗಳು ಸೃಷ್ಟಿಯಾಗಿರುವ ಘತನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನಲ್ಲಿ ಗಾಳಿ ಮಳೆಯಿಂದಾಗಿ ಚಲುವರಾಯ, ನಿಂಗರಾಜು, ನಂಜೇಗೌಡ ಸಿದ್ದಾಚಾರಿ, ಸಿದ್ದಮ್ಮ, ರಾಜೇಶ ಎಂಬುವವರ ಮನೆಗೋಡೆಗಳು ಕುಸಿದಿವೆ. ಮನೆಯಲ್ಲಿದ್ದ ದವಸ-ಧಾನ್ಯಗಳು ಮಣ್ಣುಪಾಲಾಗಿವೆ.
ಮನೆಯಲ್ಲಿದ್ದವರಿಗೆ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಮಳೆ ಹಾನಿಯಿಂದಾದ ತೊಂದರೆಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಹುಣಸೂರಿನ ಕಡೆಮನಗನಹಳ್ಳಿಯಲ್ಲಿ ಭಾರಿ ಮಳೆ ಬಿರುಗಾಳಿ ಹೊಡೆತಕ್ಕೆ ಕೊಟ್ಟಿಗೆಗಳ ಮೇಲ್ಛಾವಣಿ ಹಾರಿ ಹೋಗಿವೆ.
ರಾಮನಗರದಲ್ಲಿ ಬೀಸಿದ ಬಿರುಗಾಳಿ ಧಾರಾಕಾರ ಮಳೆಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಬಿರುಗಾಳಿಯ ಭೀಕರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.