alex Certify ಕಾನೂನು ಬಾಹಿರವಾಗಿ ಮನೆಯಲ್ಲೇ ಗರ್ಭಪಾತ ಮಾಡಿಸುತ್ತಿದ್ದ ನರ್ಸ್ ಗಳಿಬ್ಬರು ಅರೆಸ್ಟ್: ಸೇವೆಯಿಂದ ಅಮಾನತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾನೂನು ಬಾಹಿರವಾಗಿ ಮನೆಯಲ್ಲೇ ಗರ್ಭಪಾತ ಮಾಡಿಸುತ್ತಿದ್ದ ನರ್ಸ್ ಗಳಿಬ್ಬರು ಅರೆಸ್ಟ್: ಸೇವೆಯಿಂದ ಅಮಾನತು

ವಿಜಯಪುರ: ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸುತ್ತಿದ್ದ ಇಬ್ಬರು ನರ್ಸ್ ಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಲಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿತ್ರಿ ಅರಕೇರಿ, ಮುದ್ದೆಬಿಹಾಳ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಹುಲ್ಲೂರು ಗ್ರಾಮದ ಸುಭದ್ರಾ ಭಜಂತ್ರಿ ಬಂಧಿತರು.

ಹುಲ್ಲೂರಿನಲ್ಲಿ ಸುಭದ್ರಾ ಅವರ ಮನೆಯಲ್ಲಿ ಇಬ್ಬರು ಸೇರಿಕೊಂಡು ಗರ್ಭಪಾತ ಮಾಡುತ್ತಿದ್ದರು. ಹಿರಿಯ ಅಧಿಕಾರಿಗಳ ತಂಡದ ದಾಳಿ ಮಾಡಿದ ವೇಳೆ ಗರ್ಭಪಾತ ಮಾಡಿಸಿರುವುದು ಸಾಬೀತಾಗಿತ್ತು. ಅವರ ವಿರುದ್ಧ ತಾಲೂಕು ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ ದೂರು ನೀಡಿದ್ದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಇವರಿಬ್ಬರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...