ನವದೆಹಲಿ: ಮಹಾರಾಷ್ಟ್ರದಲ್ಲಿ ಇಂದು ಮತ್ತಿಬ್ಬರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂಬೈನ ಇಬ್ಬರಲ್ಲಿ ಒಮಿಕ್ರೋನ್ ಸೋಂಕು ತಗುಲಿದ್ದು, ಇದುವರೆಗೆ ಮಹಾರಾಷ್ಟ್ರದಲ್ಲಿ 10 ಜನರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ಭಾರತದಲ್ಲಿ ಇದುವರೆಗೆ 23 ಜನರಿಗೆ ಒಮಿಕ್ರಾನ್ ಸೋಂಕು ತಗುಲಿದೆ. ನಿನ್ನೆ ಒಂದೇ ದಿನ ಒಮಿಕ್ರಾನ್ ದಿಢೀರ್ ಜಿಗಿತ ಕಂಡು ರಾಜಸ್ಥಾನದಲ್ಲಿ 9, ಮಹಾರಾಷ್ಟ್ರದಲ್ಲಿ 8, ದೆಹಲಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿತ್ತು.
ಮುಂಬೈನಲ್ಲಿ ಇಂದು ಕೊರೋನಾ ವೈರಸ್‌ನ ರೂಪಾಂತರ ಒಮಿಕ್ರಾನ್ ಎರಡು ಪ್ರಕರಣಗಳು ವರದಿಯಾಗಿವೆ. 37 ವರ್ಷದ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ವ್ಯಕ್ತಿ ಮತ್ತು ಅವರ 36 ವರ್ಷದ ಯುಎಸ್ ರಿಟರ್ನಿ ಸ್ನೇಹಿತನಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆಯನ್ನು 10 ಕ್ಕೆ ಏರಿಕೆಯಾಗಿದೆ.