ಸುಡುಸುಡೋ ಬಿಸಿಲಿಗೆ ಜೀವ ಸಂಕುಲವೇ ಬಸವಳಿದು ಹೋಗಿತ್ತು. ಯಾವಾಗ ಮಳೆಗಾಲ ಶುರುವಾಗುತ್ತೆ ಅಂತ ಎಲ್ಲ ಕಾಯ್ತಾ ಇದ್ದರು. ಆಗಲೇ ನೋಡಿ ವರುಣದೇವ ಭೂಮಿಗಿಳಿದು ಬಂದಿದ್ದ. ಆದರೆ ಈ ಬಾರಿ ಬಂದಿದ್ದು ಸೈಲೆಂಟಾಗಿ ಅಲ್ಲ, ಫುಲ್ ವೈಲೆಂಟ್ ಆಗಿ. ಇದರ ಪರಿಣಾಮ ಮುಂಗಾರು ಮಳೆಯ ಆರ್ಭಟಕ್ಕೆ ಜಲಪ್ರಳಯವೇ ಸೃಷ್ಟಿಯಾಗಿ ಹೋಗಿದೆ.
ಈಗಾಗಲೇ ಬಿಹಾರ್ನಲ್ಲಿ ಸಿಡಿಲು, ಮಿಂಚಿನ ಹೊಡೆತಕ್ಕೆ 17ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಇನ್ನೂ ಈಗ ಅಸ್ಸಾಂನ ಉದಯಪುರದಲ್ಲಿ ಹೊಡೆದ ಸಿಡಿಲಿಗೆ ಇಬ್ಬರು ಬಾಲಕಿಯರು, ಅದರಲ್ಲಿ ಒಬ್ಬ ಬಾಲಕಿ ವಯಸ್ಸು 13ವರ್ಷ ಹಾಗೂ ಇನ್ನೊಬ್ಬ ಬಾಲಕಿ ವಯಸ್ಸು 15 ಮೃತಪಟ್ಟಿದ್ದಾರೆ. ಇನ್ನೂ ಇದೇ ಘಟನೆಯಲ್ಲಿ ಓರ್ವ 20 ವರ್ಷದ ಮಹಿಳೆ ಕೂಡಾ ಸಾವನ್ನಪ್ಪಿದ್ದು ಆಕೆ 7 ತಿಂಗಳ ಗರ್ಭಿಣಿಯ ಅಂತ ಹೇಳಲಾಗುತ್ತಿದೆ.
ಈ ಘಟನೆ ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಯ ಬಳಿ ಇರುವ ಅಲೈಸರಿ ಎಂಬ ಗ್ರಾಮದಲ್ಲಿ ಸಂಭವಿಸಿದೆ. ರಾತ್ರಿ ಸಮಯದಲ್ಲಿ ಮೂವರಿಗೆ ಸಿಡಿಲು ಹೊಡೆದಿದ್ದು, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲ, ಅಲ್ಲೇ ಸುತ್ತಮುತ್ತ ಇದ್ದ ಜಾನುವಾರುಗಳು ಸಹ ಸತ್ತು ಹೋಗಿವೆ.
ಇಲ್ಲಿನ ಮಜಬತ್ ಪೊಲೀಸ್ ಠಾಣೆಯವರು ಪ್ರಕರಣವನ್ನ ದಾಖಲಿಸಿಕೊಂಡು 14 ಕಿಲೋಮೀಟರ್ ದೂರದಲ್ಲಿ ನಡೆದ ಘಟನಾ ಸ್ಥಳಕ್ಕೆ ಕಾಡಿನ ಮಾರ್ಗದ ಮೂಲಕ ಹೋಗಿದ್ದಾರೆ. ಈಗ ಶವಗಳನ್ನ ಪೋಸ್ಟ್ಮಾರ್ಟ್ಂಗೆ ಕಳುಹಿಸಲಾಗಿದೆ.