ರೆಸ್ಟೋರೆಂಟ್ ಒಂದರ ಎದುರು, ದ್ವಿಚಕ್ರ ವಾಹನವೊಂದರಲ್ಲಿ ಬಂದ ಕಳ್ಳರು ತನ್ನ ಸ್ನೇಹಿತೆಯರೊಂದಿಗೆ ಕಂಟೆಂಟ್ ಸೃಷ್ಟಿಸುತ್ತಿದ್ದ ಯುವತಿಯೊಬ್ಬರ ಮೊಬೈಲ್ ಕಸಿಯಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೊಡ್ ಆಗಿದೆ.
ಬ್ಯಾಂಗಲೋರ್ 360 ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ರುಚಿಕಾ ಹೆಸರಿನ ಕಂಟೆಂಟ್ ಸೃಷ್ಟಿಕರ್ತೆ ಈ ಘಟನೆ ವೇಳೆ ಬೀದಿಯಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಕಳ್ಳತನದ ಪ್ರಯತ್ನದ ವೇಳೆ ನಾಲ್ವರು ಯುವತಿಯರು ವ್ಲಾಗ್ ಮಾಡುತ್ತಿದ್ದರು.
“ಯಾವತ್ತಾದರೂ ಗುಫಾ ರೆಸ್ಟೋರೆಂಟ್‌ನಲ್ಲಿ ತಿಂದಿದ್ದೀರಾ?” ಎಂದು ಯುವತಿಯೊಬ್ಬರು ಕೇಳುತ್ತಿದ್ದಂತೆಯೇ, ಹಿಂಬದಿಯಲ್ಲಿ ಬೈಕ್‌ನಲ್ಲಿ ಇಬ್ಬರು ಕಳ್ಳರು ಬರಲಾರಂಭಿಸಿದ್ದಾರೆ. ಹಿಂಬದಿ ಸವಾರ ರುಚಿಕಾರ ಮೊಬೈಲ್ ಕಸಿಯಲು ಯತ್ನಿಸಿ, ಅದರಲ್ಲಿ ವಿಫಲನಾಗಿದ್ದಾನೆ.
“ನೆನ್ನೆ ರೆಸ್ಟೋರೆಂಟ್ ಒಂದರ ಬಳಿ ಅಪಾಯಕಾರಿ ಘಟನೆಯೊಂದು ಜರುಗಿತು. ನಾನು ನಿಮ್ಮೊಂದಿಗೆ ಇದನ್ನು ಶೇರ್ ಮಾಡಲು ಬಯಸುತ್ತೇನೆ…….. ಕಳ್ಳರು ನನ್ನ ಫೋನ್ ಕಸಿಯಲು ಯತ್ನಿಸುತ್ತಲೇ ನಾನು ಅದನ್ನು ಕೆಳಗೆ ಬಿಟ್ಟುಬಿಡುವ ಮೂಲಕ ಕಳ್ಳತನದ ಯತ್ನ ವಿಫಲಗೊಳಿಸಿದೆ,” ಎಂದು ಘಟನೆಯನ್ನು ವಿವರಿಸಿ ಟ್ವೀಟ್ ಮಾಡಿದ್ದಾರೆ ರುಚಿಕಾ.
ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್, “ದಯವಿಟ್ಟು ಘಟನೆ ನಡೆದ ಸ್ಥಳದ ವಿವರಗಳು ಹಾಗೂ ಸಂಪರ್ಕದ ವಿವರಗಳನ್ನು ಡಿಎಂ ಮಾಡಿ,” ಎಂದಿದೆ.
https://twitter.com/bangalore360_/status/1640340963611508737?ref_src=twsrc%5Etfw%7Ctwcamp%5Etweetembed%7Ctwterm%5E1640340963611508737%7Ctwgr%5E883cdf27d4be5fefb8c9091cfc7d31c5756ca402%7Ctwcon%5Es1_&ref_url=https%3A%2F%2Fwww.hindustantimes.com%2Fcities%2Fbengaluru-news%2Fthieves-try-to-snatch-bengaluru-influencer-s-mobile-while-shooting-video-101680089061088.html