alex Certify Watch | ಹಾಡಹಗಲೇ ಆಪಲ್ ಸ್ಟೋರ್‌ ದೋಚಿದ ಕಳ್ಳರು; ಕಣ್ಣೆದುರೇ ಕಳ್ಳತನವಾದರೂ ಸುಮ್ಮನೆ ನೋಡುತ್ತಿದ್ದರು ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch | ಹಾಡಹಗಲೇ ಆಪಲ್ ಸ್ಟೋರ್‌ ದೋಚಿದ ಕಳ್ಳರು; ಕಣ್ಣೆದುರೇ ಕಳ್ಳತನವಾದರೂ ಸುಮ್ಮನೆ ನೋಡುತ್ತಿದ್ದರು ಜನ

ಕಳ್ಳರು ಸಾಮಾನ್ಯವಾಗಿ ರಾತ್ರಿ ಆದಾಗಲೇ ತಮ್ಮ ತಮ್ಮ ಕೆಲಸ ಶುರು ಹಚ್ಕೊಳ್ತಾರೆ. ಅಂಗಡಿ ಬಾಗಿಲು ಒಡೆದು ಕಳ್ಳತನ ಮಾಡೋದು, ಇಲ್ಲಾ ಯಾರೂ ಇಲ್ಲದ ಮನೆಗೆ ಹೋಗಿ ದೋಚುತ್ತಾರೆ.

ಆದರೆ ಕ್ಯಾಲಿಫೋರ್ನಿಯಾದ ಅಂಗಡಿಯೊಂದರಲ್ಲಿ ಹಾಡಹಗಲೇ ಕಳ್ಳತನ ಮಾಡಿದ್ದಾರೆ. ಅದು ಕೂಡಾ ಅಂಗಡಿಯಲ್ಲಿ ಜನರು ಇದ್ದಾಗ. ವಿಚಿತ್ರ ಏನಂದ್ರೆ ಅಂಗಡಿಯಲ್ಲಿದ್ದ ಕೆಲಸಗಾರರಾಗಲಿ ಇಲ್ಲಾ, ಅಲ್ಲೇ ಇದ್ದ ಗ್ರಾಹಕರು ಯಾರೊಬ್ಬರೂ ಕೂಡ ಆ ಇಬ್ಬರು ಕಳ್ಳರನ್ನ ತಡೆಯಲಿಲ್ಲ. ಬದಲಾಗಿ ಅವರಿಬ್ಬರು ಏನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ ಅನ್ನೋದನ್ನ ನೋಡುತ್ತಾ ಸುಮ್ಮನೆ ನಿಂತಿದ್ದಾರೆ.

ಅಮೆರಿಕಾದಲ್ಲಿ, ಬ್ಲಾಕ್‌ಫ್ರೈಡೇ ಪ್ರಯುಕ್ತ ಹೊಸ ಹೊಸ ಪ್ರಾಡೆಕ್ಟ್‌ಗಳ ಮೇಲೆ ಆಫರ್ ಬಿಟ್ಟಿರುತ್ತಾರೆ. ಆಪಲ್ ಕಂಪನಿ ಕೂಡಾ ಅವರ ಕಂಪನಿ ಫೋನ್, ಲಾಪ್ ಟಾಪ್‌, ಟ್ಯಾಬ್‌ಗಳ ಮೇಲೆ ಆಫರ್ ಬಿಟ್ಟಿದ್ದಾರೆ. ಆದ್ದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಅಂಗಡಿಗೆ ಹೋಗಿರುತ್ತಾರೆ. ಆದರೂ ಆ ಇಬ್ಬರು ಮುಸುಕುಧಾರಿ ಕಳ್ಳರು ಆಪಲ್ ಸ್ಟೋರ್ ಹೋಗಿ ಅಲ್ಲಿದ್ದ ಎಲ್ಲ ವಸ್ತುಗಳನ್ನ ಕದಿಯುತ್ತಾರೆ.

ಅವರ ಬಳಿ ಯಾವ ಮಾರಕ ಅಸ್ತ್ರಗಳಿ‌ಲ್ಲದಿದ್ದರೂ, ಯಾರೊಬ್ಬರೂ ಅವರನ್ನ ತಡೆಯುವ ಪ್ರಯತ್ನ ಮಾಡುವುದಿಲ್ಲ ಅನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ.

ಅಲ್ಲೇ ಇದ್ದ ಗ್ರಾಹಕನೊಬ್ಬ ಆ ಇಬ್ಬರು ಕಳ್ಳರು ಕದಿಯುವ ದೃಶ್ಯವನ್ನ ತನ್ನ ಮೊಬೈಲ್‌ನಲ್ಲಿ ರಿಕಾರ್ಡ್ ಮಾಡಿದ್ದಾನೆ. ಕಳ್ಳರು ಅಂಗಡಿಯ ಮೂಲೆ ಮೂಲೆಯಲ್ಲಿ ಸುತ್ತು ಹಾಕುವುದು. ಅಲ್ಲಿದ್ದ ವಸ್ತುಗಳನ್ನ ತಮ್ಮ ಬ್ಯಾಗ್ ಒಳಗೆ ಹಾಕಿಕೊಳ್ಳುವುದನ್ನ ಗಮನಿಸಬಹುದು. ಜೊತೆಗೆ ಈ ಸ್ಟೋರ್ ಒಳಗೆ ಕಳ್ಳರು ಬರುವುದನ್ನ ನೋಡಿ ಅಲ್ಲೇ ಇದ್ದ ಗ್ರಾಹಕರು ಅವರನ್ನ ಹಿಡಿಯಿರಿ ಅಂತ ಹೇಳುವುದನ್ನ ಕೇಳಬಹುದು. ಆದರೆ ಅಲ್ಲೇ ಇದ್ದ ಇನ್ನೊಬ್ಬ ಗ್ರಾಹಕ ಅವರನ್ನ ತಡೆಯಬೇಡಿ. ಹೋಗಲು ಬಿಡಿ ಅಂತ ಹೇಳುತ್ತಾನೆ.

ಈ ವಿಡಿಯೋ ಶೀರ್ಷಿಕೆಯಲ್ಲಿ ಬ್ಲಾಕ್‌ ಫ್ರೈಡೇಯಂದು ಇಬ್ಬರು ಕಳ್ಳರು, ಯುನಿವರ್ಸಿಟಿ ಅವೆನ್ಯೂನಲ್ಲಿದ್ದ ಆಪಲ್‌ ಸ್ಟೋರ್‌ಗೆ ನುಗ್ಗಿ ಮೊಬೈಲ್‌ ಸೇರಿದಂತೆ ಬೇರೆ ಬೇರೆ ವಸ್ತುಗಳನ್ನ ಕದ್ದರು. ಅದು ಕೂಡಾ ಅಲ್ಲಿ ಸೇರಿದ್ದ ಜನರ ಮುಂದೆಯೇ“ ಎಂದು ಬರೆದಿದ್ದಾರೆ. 20 ಸೆಕೆಂಡ್ ನಂತರ ಸ್ಥಳಕ್ಕೆ ಬಂದ ಪೊಲೀಸರು ಅವರು ಓಡಿ ಹೋಗುತ್ತಿದ್ದದ್ದನ್ನ ನೋಡಿಯೂ ಅವರನ್ನ ಹಿಡಿಯಲು ಪ್ರಯತ್ನಿಸಲಿಲ್ಲ. ಎಂದು ಬರೆದಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲರೂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಕಳ್ಳರನ್ನ ಹಿಡಿಯುವುದಿರಲಿ, ಅವರನ್ನ ತಡೆಯುವ ಪ್ರಯತ್ನ ಕೂಡಾ ಮಾಡಲಿಲ್ಲ ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ತಮ್ಮ ಅಸಮಾಧಾನವನ್ನ ತೋರಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...