ಸ್ಪೇನ್: ತಮಗೆ ಶಿಕ್ಷಕಿ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಇಬ್ಬರು ವಿದ್ಯಾರ್ಥಿಗಳು ಆಕೆಯನ್ನು ಹೊಡೆದು ಸಾಯಿಸಿರುವ ಭಯಾನಕ ಘಟನೆ ಸ್ಪೇನ್ನಲ್ಲಿ ನಡೆದಿದೆ. ಈ ಘಟನೆ ಕಳೆದ ವರ್ಷ ನಡೆದಿದ್ದು, ಬಾಲಕರಿಬ್ಬರ ವಿರುದ್ಧ ವಕೀಲರು ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಇಲ್ಲಿಯ ಫೇರ್ಫೀಲ್ಡ್ ಹೈಸ್ಕೂಲ್ನಲ್ಲಿ ಕಳೆದ ವರ್ಷ ತಮ್ಮ ಸ್ಪ್ಯಾನಿಷ್ ಶಿಕ್ಷಕಿಯನ್ನು ಬೇಸ್ಬಾಲ್ ಬ್ಯಾಟ್ನಿಂದ ಕೊಂದಿರುವ ಘಟನೆ ಇದಾಗಿದೆ. ನೊಹೆಮಾ ಗ್ರಾಬರ್ ಎಂಬ 66 ವರ್ಷದ ಶಿಕ್ಷಕಿ ವಿದ್ಯಾರ್ಥಿಗಳಿಂದಾಗಿ ಜೀವ ಕಳೆದುಕೊಂಡಿದ್ದು, ಇದರ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದೆ.
ಕಳೆದ ವರ್ಷ ನವೆಂಬರ್ 2 ರಂದು ಫೇರ್ಫೀಲ್ಡ್ ಅಯೋವಾದಲ್ಲಿ ಶಾಲೆಗೆ ಹೋಗಿದ್ದ ಶಿಕ್ಷಕಿ ನಂತರ ಕಾಣೆಯಾಗಿದ್ದರು.
ಮರುದಿನ, ಸ್ಥಳೀಯ ಉದ್ಯಾನವನದಲ್ಲಿ ಅವರ ಶವ ಪತ್ತೆಯಾಗಿತ್ತು. ಉದ್ಯಾನದಲ್ಲಿದ್ದ ತಳ್ಳುಬಂಡಿ ಅಡಿ ಅತೀವ ಗಾಯಗೊಂಡಿದ್ದ ಸ್ಥಿತಿಯಲ್ಲಿ ಅವರ ಶವ ಸಿಕ್ಕಿತ್ತು.
ನಂತರ ತನಿಖೆ ಮಾಡಿದಾಗ 16 ವರ್ಷ ವಯಸ್ಸಿನವರಾಗಿದ್ದ ಜೆರೆಮಿ ಗುಡೇಲ್ ಮತ್ತು ವಿಲ್ಲರ್ಡ್ ಮಿಲ್ಲರ್ ಎಂಬ ಇಬ್ಬರು ಮಕ್ಕಳು ಈ ಕೃತ್ಯ ಮಾಡಿದ್ದು ಬಯಲಿಗೆ ಬಂದಿತ್ತು. ಸದ್ಯ ಇದರ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದ್ದು, ಸರ್ಕಾರಿ ವಕೀಲರು ವಿದ್ಯಾರ್ಥಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ನೀಡಿದ್ದಾರೆ.