ಉತ್ತರಾಖಂಡ್‌ನ ಬಾಗೇಶ್ವರ್ ಜಿಲ್ಲೆಯ ಒಂದು remote ಪ್ರದೇಶದಲ್ಲಿ, ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರು ಶಾಲಾ ಸಮಯದಲ್ಲಿ ಕುಡಿದ ಮತ್ತಿನಲ್ಲಿ ಕಂಡುಬಂದಿದ್ದು, ಈ ಘಟನೆಯಿಂದಾಗಿ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಈ ಬೇಜವಾಬ್ದಾರಿ ವರ್ತನೆಯು ಪೋಷಕರಲ್ಲಿ ಆಕ್ರೋಶವನ್ನುಂಟುಮಾಡಿದೆ, ಈ ಪ್ರದೇಶದಲ್ಲಿ, ವಿಶೇಷವಾಗಿ ಬೆಟ್ಟ ಪ್ರದೇಶಗಳಲ್ಲಿ ಶಿಕ್ಷಣ ವ್ಯವಸ್ಥೆ ಕ್ಷೀಣಿಸುತ್ತಿರುವ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
“ಶಿಕ್ಷಕರು ಯಾವಾಗಲೂ ಕುಡಿದಿರುತ್ತಾರೆ ಮತ್ತು ಅವರು ಮಕ್ಕಳಿಗೆ ಏನನ್ನೂ ಕಲಿಸುವುದಿಲ್ಲ” ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದ್ದಾರೆ. ಪರಿಣಾಮವಾಗಿ, ಅನೇಕ ಮಕ್ಕಳು ಶಾಲೆಗೆ ಹಾಜರಾಗಲು ನಿರಾಕರಿಸುತ್ತಾರೆ, ಕೆಲವರು ಬೇರೊಂದು ಶಾಲೆಗೆ ಪ್ರತಿದಿನ 6 ಕಿ.ಮೀ ನಡೆಯುವಂತಾಗಿದೆ.
ಕಪಕೋಟ್ ಬ್ಲಾಕ್‌ನ ಹಮ್ತಿ ಕಪ್ರಿ ಗ್ರಾಮದ ಬಿರುವ ಬಿಲೋನಾ ಜೂನಿಯರ್ ಹೈಸ್ಕೂಲ್‌ನಲ್ಲಿ ಸೋಮವಾರ ನಿಗದಿತ ಪೋಷಕ-ಶಿಕ್ಷಕರ ಸಭೆಯ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಪೋಷಕರು ಮುಖ್ಯೋಪಾಧ್ಯಾಯ ಮಹೇಶ್ ಗುರ್ರಾನಿ ಮತ್ತು ಸಹಾಯಕ ಶಿಕ್ಷಕ ಧೀರಜ್ ಕುಮಾರ್ ಅವರನ್ನು ಕುಡಿದ ಸ್ಥಿತಿಯಲ್ಲಿ ನೋಡಿದ್ದಾರೆ. ಇವರ ವರ್ತನೆಯಿಂದ ಬೇಸತ್ತ ಗ್ರಾಮಸ್ಥರು ಮೊದಲು ತುರ್ತು ಸೇವೆಗಳಿಗೆ (112) ಕರೆ ಮಾಡಿ ನಂತರ ಶಿಕ್ಷಕರ ವೀಡಿಯೊವನ್ನು ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಿಕ್ಷಕರನ್ನು ತಕ್ಷಣವೇ ಅಮಾನತುಗೊಳಿಸಲು ಡಿಎಂ ಆದೇಶಿಸಿದ್ದಾರೆ.
बागेश्वर-शराब के नशे में 2 शिक्षकों का वीडियो वायरल, डीएम ने वायरल वीडियो का लिया तत्काल संज्ञान
दोनों शिक्षकों को निलंबित करने के दिए निर्देश, कपकोट के उच्च प्राथमिक विद्यालय का मामला, शिक्षा के मंदिर में अराजकता बर्दाश्त नहीं#Bageshwar @PoliceBageshwar pic.twitter.com/xQp8o5fgvp
— भारत समाचार | Bharat Samachar (@bstvlive) February 10, 2025